Select Your Language

Notifications

webdunia
webdunia
webdunia
webdunia

ಧೋನಿ ಹಿಂದೆ ಯಾಕೆ ಬಿದ್ದಿದ್ದೀರಿ? ಕೊಹ್ಲಿ ಸಿಡಿಮಿಡಿ

ಧೋನಿ ಹಿಂದೆ ಯಾಕೆ ಬಿದ್ದಿದ್ದೀರಿ? ಕೊಹ್ಲಿ ಸಿಡಿಮಿಡಿ
ಮುಂಬೈ , ಬುಧವಾರ, 8 ನವೆಂಬರ್ 2017 (11:29 IST)
ಮುಂಬೈ: ಟಿ20 ಮಾದರಿಯಲ್ಲಿ ವಿಫಲರಾಗುತ್ತಿರುವ ಹಿನ್ನಲೆಯಲ್ಲಿ ಧೋನಿ ನಿವೃತ್ತಿ ಪಡೆಯಬೇಕು ಎಂದು ಮಾಜಿ ಕ್ರಿಕೆಟಿಗರು ಸೇರಿದಂತೆ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಸಿಟ್ಟಿಗೆದ್ದಿದ್ದಾರೆ.

 
ವಿವಿಎಸ್ ಲಕ್ಷ್ಮಣ್ ಮತ್ತು ಅಜಿತ್ ಅಗರ್ಕರ್ ಧೋನಿ ನಿವೃತ್ತಿಯಾಗಬೇಕೆಂದು ಹೇಳಿದ ಪ್ರಮುಖರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ ಜನರಿಗೆ ಸ್ವಲ್ಪ ತಾಳ್ಮೆಯಿರಲಿ ಎಂದಿದ್ದಾರೆ.

‘ದೆಹಲಿ ಪಂದ್ಯದಲ್ಲಿ ಅವರು ಸಿಕ್ಸರ್ ಬಾರಿಸಿದಾಗ ಎಲ್ಲರೂ ಹೊಗಳಿದರು. ಆದರೆ ನಂತರ ಒಂದು ಪಂದ್ಯದಲ್ಲಿ ಚೆನ್ನಾಗಿ ಆಡಲಿಲ್ಲ ಎಂದು ಅವರ ಜೀವನದ ಹಿಂದೆ ಬಿದ್ದಿರುವುದು ಯಾಕೆ?’ ಎಂದು ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧೋನಿಗೆ ತನ್ನ ಬಗ್ಗೆ ಚೆನ್ನಾಗಿ ಗೊತ್ತು. ಅವರು ಯಾವಾಗ ಏನು ಮಾಡಬೇಕೆಂದು ತೀರ್ಮಾನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದು ಕೊಹ್ಲಿ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನೋಟು ನಿಷೇಧದಿಂದಾಗಿ ಪರದಾಡಿದ್ದ ಕ್ರಿಕೆಟಿಗರು