Publish Date: Wed, 08 Nov 2017 (08:45 IST)
Updated Date: Wed, 08 Nov 2017 (08:46 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ನಾಯಕ ಕೊಹ್ಲಿಯೊಂದಿಗಿನ ವಿರಸದ ಬಗ್ಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕೋಚ್ ಆಗಿದ್ದಾಗ ಕುಂಬ್ಳೆ ಹೆಡ್ ಮಾಸ್ಟರ್ ರೀತಿ ವರ್ತಿಸುತ್ತಿದ್ದರು ಎಂದು ಕೆಲವು ಆಟಗಾರರು ಆಕ್ಷೇಪಿಸಿದ್ದರು. ಅಲ್ಲದೆ ತಮ್ಮ ಮೇಲೆ ಅತಿಯಾದ ಶಿಸ್ತು ತೋರುತ್ತಾರೆ ಎಂದು ನಾಯಕ ಕೊಹ್ಲಿ ಅಸಮಾಧಾನ ಹೊಂದಿದ್ದರು.
ಈ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕುಂಬ್ಳೆ ಪರೋಕ್ಷವಾಗಿ ನಾಯಕ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ. ‘ನನ್ನ ತಾತ ಹೆಡ್ ಮಾಸ್ಟರ್ ಆಗಿದ್ದರು. ಅವರದೇ ಶಿಸ್ತು ನನ್ನ ಮೇಲೂ ಪ್ರಭಾವ ಬೀರಿದೆ. ಅದೇ ಶಿಸ್ತಿನಲ್ಲಿ ನಾನು ಆಟವಾಡುತ್ತಿದ್ದೆ. ಹೆಡ್ ಮಾಸ್ಟರ್ ಎಂಬ ಟ್ಯಾಗ್ ನಂತರವೂ ನನ್ನ ವೃತ್ತಿ ಜೀವನದಲ್ಲಿ ಕೇಳಿಬಂತು’ ಎಂದು ಕುಂಬ್ಳೆ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Wed, 08 Nov 2017 (08:45 IST)
Updated Date: Wed, 08 Nov 2017 (08:46 IST)