Publish Date: Fri, 10 Nov 2017 (08:30 IST)
Updated Date: Fri, 10 Nov 2017 (08:32 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವುದರಲ್ಲಿ ಮಾತ್ರವಲ್ಲ. ಗಳಿಕೆಯಲ್ಲೂ ಇವರೇ ನಂ.1. ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ಇನ್ ಸ್ಟಾಗ್ರಾಂ ಪುಟದಲ್ಲಿ ಸಕ್ರಿಯರಾಗಿರುವ ವಿರಾಟ್ ಕೊಹ್ಲಿ ಪ್ರತೀ ಪ್ರಮೋಷನಲ್ ಪೋಸ್ಟ್ ಗೆ ಜೇಬಿಗಳಿಸುವ ಮೊತ್ತ ಕೇಳಿದರೆ ಇವರೆಷ್ಟು ದುಬಾರಿ ಎನ್ನುವುದು ನಿಮಗೆ ಅರಿವಾಗುತ್ತದೆ.
ಇನ್ ಸ್ಟಾಗ್ರಾಂ ಸಾಮಾಜಿ ಜಾಲತಾಣದಲ್ಲಿ 15 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಕೊಹ್ಲಿ ಪ್ರತೀ ಪ್ರಮೋಷನಲ್ ಪೋಸ್ಟ್ ಗಳಿಗೆ ಅಂದಾಜು 500,000 ಡಾಲರ್ ಅಂದರೆ 3.2 ಕೋಟಿ ರೂ. ಗಳಿಸುತ್ತಾರಂತೆ! ಇಷ್ಟೊಂದು ದುಬಾರಿ ಮೊತ್ತ ಗಳಿಸುವ ಇನ್ನೊಬ್ಬ ಕ್ರೀಡಾಳು ಎಂದರೆ ಫುಟ್ ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ