Publish Date: Wed, 15 Nov 2017 (09:09 IST)
Updated Date: Wed, 15 Nov 2017 (09:15 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ನಾಳೆಯಿಂದ ಟೀಂ ಇಂಡಿಯಾ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗೆ ಮೊದಲು ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದ ಮೈದಾನಕ್ಕೆ ಸ್ಥಳೀಯ ಕಾರ್ಪೆಂಟರ್ ನನ್ನು ಕರೆಸಿಕೊಂಡಿದ್ದಾರೆ.
ಟೆಸ್ಟ್ ಸರಣಿಗೂ ಕಾರ್ಪೆಂಟರ್ ಗೂ ಏನು ಸಂಬಂಧ ಎಂದು ನೀವು ಕೇಳಬಹುದು. ಆದರೆ ಸರಣಿಗೆ ಸಜ್ಜಾಗುತ್ತಿರುವ ಕೊಹ್ಲಿಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಅವರು ತಮ್ಮ ಬ್ಯಾಟ್ ವಿಷಯದಲ್ಲಂತೂ ಸ್ವಲ್ಪವೂ ರಾಜಿ ಮಾಡಿಕೊಳ್ಳುವ ಅಸಾಮಿಯಲ್ಲ.
ಹೀಗಾಗಿ ಈಡನ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದ ಕೊಹ್ಲಿ ತಮ್ಮ ಬ್ಯಾಟ್ ನ ಹಿಡಿಕೆ ಗಾತ್ರ ಹೆಚ್ಚಾಯಿತು ಎಂದು ಸ್ಥಳೀಯ ಕಾರ್ಪೆಂಟರ್ ನನ್ನು ಕರೆಸಿ ಬ್ಯಾಟ್ ಅಂದಗೊಳಿಸಿದ್ದಾರೆ. ಇತ್ತೀಚೆಗೆ ಐಸಿಸಿ ಕೂಡಾ ಬ್ಯಾಟ್ ಹಿಡಿಕೆ ಗಾತ್ರದ ಬಗ್ಗೆ ಹೊಸ ನಿಯಮ ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ