Publish Date: Thu, 09 Nov 2017 (08:29 IST)
Updated Date: Thu, 09 Nov 2017 (08:31 IST)
ಬೆಂಗಳೂರು: ಸತತ ಮೂರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ಹುಡುಗರು ಇಂದಿನಿಂದ ರಣಜಿ ಟ್ರೋಫಿ ಪಂದ್ಯಾವಳಿಯ ನಾಲ್ಕನೇ ಗೆಲುವಿಗೆ ಪ್ರಯತ್ನ ನಡೆಸಲಿದ್ದಾರೆ.
ನಗರದ ಹೊರವಲಯದಲ್ಲಿರುವ ಆಲೂರು ಕ್ರೀಡಾಂಗಣದಲ್ಲಿ ದೆಹಲಿ ವಿರುದ್ಧ ಕರ್ನಾಟಕದ ಹುಡುಗರು ಸೆಣಸಲಿದ್ದಾರೆ. ರಾಷ್ಟ್ರೀಯ ತಂಡದಲ್ಲಿದ್ದ ಕೆಎಲ್ ರಾಹುಲ್, ಮನೀಶ್ ಪಾಂಡೆ ಮರಳಿರುವುದು ಕರ್ನಾಟಕಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಅತ್ತ ದೆಹಲಿಯೂ ದುರ್ಬಲ ತಂಡವೇನೂ ಅಲ್ಲ. ಇಶಾಂತ್ ಶರ್ಮಾ ನಾಯಕತ್ವದ ದೆಹಲಿ ತಂಡಕ್ಕೆ ಹಿರಿಯ ಆರಂಭಿಕ ಗೌತಮ್ ಗಂಭೀರ್, ರಿಷಬ್ ಪಂತ್, ಉನ್ಮುಕ್ತ್ ಚಾಂದ್ ಪ್ರಬಲ ಅಸ್ತ್ರಗಳು. ದೆಹಲಿ ಕೂಡಾ ಮೇಲ್ನೋಟಕ್ಕೆ ಪ್ರಬಲವಾಗಿದ್ದರೂ ಕರ್ನಾಟಕಕ್ಕೆ ತವರಿನ ಪ್ರೇಕ್ಷಕರ ಬೆಂಬಲ ಪ್ಲಸ್ ಪಾಯಿಂಟ್ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ