Publish Date: Wed, 08 Nov 2017 (11:51 IST)
Updated Date: Wed, 08 Nov 2017 (11:54 IST)
ಮುಂಬೈ: ಅಮಿತಾಭ್ ಬಚ್ಚನ್ ನಿರೂಪಣೆ ಮಾಡುವ ಖ್ಯಾತ ಟಿವಿ ಶೋ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಕಾರ್ಯಕ್ರಮಕ್ಕೆ ಬಂದ ಯುವರಾಜ್ ಸಿಂಗ್ ಅಮಿತಾಭ್ ಮುಂಚೆ ಕಣ್ಣೀರು ಹಾಕಿದ್ದಾರೆ.
ತಮ್ಮ ಕ್ಯಾನ್ಸರ್ ಫೌಂಡೇಶನ್ ಗಾಗಿ ಕೌನ್ ಬನೇಗಾ ಹಾಟ್ ಸೀಟ್ ನಲ್ಲಿ ನಟಿ ವಿದ್ಯಾ ಬಾಲನ್ ಜತೆ ಕೂತು ಆಡಿದ ಯುವರಾಜ್ ಸಿಂಗ್ ತಾವು ಕ್ಯಾನ್ಸರ್ ಗೆ ತುತ್ತಾಗಿದ್ದ ಕ್ಷಣಗಳನ್ನು ನೆನೆದು ಅತ್ತೇಬಿಟ್ಟರು.
ಕ್ಯಾನ್ಸರ್ ಇದೆ ಎಂದು ತಿಳಿದಾಗ ನಾನು ನಂಬಲೇ ಇಲ್ಲ. ಅದಕ್ಕಾಗಿ ಕ್ರಿಕೆಟ್ ಬಿಟ್ಟು ಟ್ರೀಟ್ ಮೆಂಟ್ ಗೆಂದು ಸಮಯ ಕಳೆಯುವುದು ನನಗೆ ಇಷ್ಟವೇ ಇರಲಿಲ್ಲ. ಕೊನೆಗೆ ಪರಿಸ್ಥಿತಿ ಕೈ ಮೀರುತ್ತದೆ. ನಾನು ಉಳಿಯುವುದೇ ಕಷ್ಟ ಎಂದು ವೈದ್ಯರು ಎಚ್ಚರಿಸಿದ ಮೇಲಷ್ಟೇ ಚಿಕಿತ್ಸೆಗೆ ಸಿದ್ಧನಾದೆ ಎನ್ನುತ್ತಾ ಯುವರಾಜ್ ಅತ್ತೇಬಿಟ್ಟರು. ಈ ಎಪಿಸೋಡ್ ಈ ಸಾಲಿನ ಕೊನೆಯ ಶೋ ಆಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ