ಮುಂಬೈ: ಕ್ರಿಕೆಟಿಗ ಯುವರಾಜ್ ಸಿಂಗ್ ಮೇಲೆ ಅವರ ಸಹೋದರನ ಪತ್ನಿಯಾಗಿದ್ದ ಆಕಾಂಕ್ಷ ಶರ್ಮಾ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
									
										
								
																	
 
ಯುವರಾಜ್ ಸಿಂಗ್, ಅವರ ಸಹೋದರ ಝೊರಾವರ್, ತಾಯಿ ಶಬ್ನಮ್ ವಿರುದ್ಧ ಆಕಾಂಕ್ಷ ಗೃಹ ಹಿಂಸೆ ಪ್ರಕರಣ ದಾಖಲಿಸಿದ್ದಾರೆ. ಯುವರಾಜ್ ತಾಯಿ, ಸಹೋದರ ಮಾನಸಿಕ ಹಿಂಸೆ ನೀಡುವಾಗ ಯುವರಾಜ್ ಮೂಕ ಸಾಕ್ಷಿಯಾಗಿದ್ದರು ಎಂದು ಆಕಾಂಕ್ಷ ದೂರಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
									
			
			 
 			
 
 			
			                     
							
							
			        							
								
																	ಆಕಾಂಕ್ಷ ಬಿಗ್ ಬಾಸ್ 10 ರಿಯಾಲಿಟಿ ಶೋ ಸ್ಪರ್ಧಿ ಕೂಡಾ. ಆ ರಿಯಾಲಿಟಿ ಶೋನಲ್ಲೇ ಆಕೆ ತನ್ನ ಮೇಲೆ ಗೃಹ ಹಿಂಸೆ ನಡೆದಿತ್ತು ಎಂದು ಬಾಯ್ಬಿಟ್ಟಿದ್ದಳು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಯುವರಾಜ್ ಸಿಂಗ್ ತಾಯಿ ಆಕಾಂಕ್ಷಗೆ ತಾಯಿಯಾಗುವಂತೆ ಬಲವಂತ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ