Publish Date: Mon, 11 Sep 2017 (08:17 IST)
Updated Date: Mon, 11 Sep 2017 (08:19 IST)
ಮುಂಬೈ: ಯುವರಾಜ್ ಸಿಂಗ್ ವರ್ಣರಂಜಿತ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಬಹುದು ಎಂದು ಬಿಸಿಸಿಐ ಆಯ್ಕೆಗಾರರು ಸೂಚಿಸಿದಂತಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ನಿರೀಕ್ಷೆಯಂತೇ ಅವರನ್ನು ಕಡೆಗಣಿಸಲಾಗಿದೆ.
ಇದರಿಂದಾಗಿ ಎಡಗೈ ಆಲ್ ರೌಂಡರ್ ವೃತ್ತಿ ಬದುಕು ಮುಕ್ತಾಯದ ಹಂತದಲ್ಲಿದೆ ಎನ್ನಬಹುದು. ಅವರ ಸ್ಥಾನಕ್ಕೆ ಭಾರತ ತಂಡದಲ್ಲಿ ಸಮರ್ಥ ಆಲ್ ರೌಂಡರ್ ಗಳಾದ ಕೇದಾರ್ ಜಾದವ್, ಮನೀಶ್ ಪಾಂಡೆ ಅವರನ್ನು ಕರೆತರಲಾಗುತ್ತಿದೆ. ಪ್ರತಿಭಾವಂತ ಅಜಿಂಕ್ಯಾ ರೆಹಾನೆ ಸ್ಥಾನವಿಲ್ಲದೇ ಒದ್ದಾಡುತ್ತಿದ್ದಾರೆ.
ಈ ಎಲ್ಲಾ ಹಿನ್ನಲೆಯಲ್ಲಿ ಹಿರಿಯ ಯುವರಾಜ್ ಸಿಂಗ್ ವೃತ್ತಿ ಬದುಕು ಅಕ್ಷರಶಃ ಕೊನೆಯಾದಂತೇ ಆಗಿದೆ. ಹರ್ಭಜನ್ ಸಿಂಗ್, ಜಹೀರ್ ಖಾನ್ ರಂತೇ ಯುವಿ ವೃತ್ತಿ ಬದುಕೂ ಸದ್ದಿಲ್ಲದೇ ತೆರೆ ಮರೆಗೆ ಸರಿಯುತ್ತಿದೆ.