Publish Date: Sat, 26 Aug 2017 (10:53 IST)
Updated Date: Sat, 26 Aug 2017 (10:55 IST)
ನವದೆಹಲಿ: ಇತ್ತೀಚೆಗಷ್ಟೇ ಯೋ ಯೋ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲರಾದ ಹಿನ್ನಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ ಯುವರಾಜ್ ಸಿಂಗ್ ಬಿಸಿಸಿಐಗೆ ವಿಶಿಷ್ಟವಾಗಿ ತನ್ನ ಫಿಟ್ನೆಸ್ ಪ್ರದರ್ಶನ ಮಾಡಿದ್ದಾರೆ.
ಅದು ಬರಿ ಮೈಯಲ್ಲಿ ಫೋಟೋ ಪ್ರಕಟಿಸುವ ಮೂಲಕ. ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಯುವಿ ಖಾಲಿ ಎದೆ ತೋರಿಸುವ ಫೋಟೋ ಹಾಕಿಕೊಂಡು ಪರೋಕ್ಷವಾಗಿ ತಮ್ಮ ಫಿಟ್ನೆಸ್ ಪ್ರಶ್ನಿಸಿದ ಬಿಸಿಸಿಐಗೆ ಟಾಂಗ್ ಕೊಟ್ಟಿದ್ದಾರೆ.
ಆದರೆ ಯುವಿ ಮಾಡಿದ ಈ ಕೆಲಸ ಅವರಿಗೇ ಮುಳುವಾಗಿದೆ. ತಂಡದ ಸಹವರ್ತಿಗಳಾದ ರೋಹಿತ್ ಶರ್ಮಾ ಮತ್ತು ಹರ್ಭಜನ್ ಸಿಂಗ್ ಯುವಿಯ ಪೋಸ್ ನೋಡಿ ತಮಾಷೆ ಮಾಡಿದ್ದಾರೆ. ಫೋಟೋ ಜತೆಗೆ ಯುವಿ ‘ಮೂಡ್’ ಎಂದು ಬರೆದಿದ್ದರು.
ಇದನ್ನು ನೋಡಿ ಯುವಿ ಕಾಲೆಳೆದಿರುವ ರೋಹಿತ್ ಶರ್ಮಾ ‘ಮೂಡ್ ಎಂದಿದ್ದು ಏನಕ್ಕೆ ಎಂದು ಅರ್ಥವಾಗಲಿಲ್ಲ’ ಎಂದು ತಮಾಷೆ ಮಾಡಿದ್ದಾರೆ. ಅತ್ತ ಹರ್ಭಜನ್ ಸಿಂಗ್ ‘ಸಲ್ಲು ಭಾಯ್’ ಎಂದು ಕಾಮೆಂಟ್ ಮಾಡಿದ್ದಾರೆ.