Select Your Language

Notifications

webdunia
webdunia
webdunia
Thursday, 17 April 2025
webdunia

ಯುವರಾಜ್ ಸಿಂಗ್, ಸುರೇಶ್ ರೈನಾ ತಂಡದಿಂದ ಕೈ ಬಿಟ್ಟಿದ್ದರ ರಹಸ್ಯ ಬಯಲು

ಯುವರಾಜ್ ಸಿಂಗ್
ಮುಂಬೈ , ಗುರುವಾರ, 17 ಆಗಸ್ಟ್ 2017 (09:18 IST)
ಮುಂಬೈ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಹಿರಿಯ ಆಟಗಾರರಾದ  ಯುವರಾಜ್ ಸಿಂಗ್, ಸುರೇಶ್ ರೈನಾರನ್ನು ಕೈಬಿಟ್ಟಿದ್ದೇಕೆ ಎಂದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರ ರಹಸ್ಯ ಬಯಲಾಗಿದೆ.

 
ಯುವರಾಜ್, ರೈನಾಗೆ ಕೊಕ್ ನೀಡಲು ಕಾರಣ ಫಿಟ್ ನೆಸ್ ಕಾರಣ ಎನ್ನಲಾಗಿದೆ. ಇವರಿಬ್ಬರಿಗೂ ಇದೇ ಕಾರಣಕ್ಕೆ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.

ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ಯೋ  ಯೋ ಎಂಬ ಫಿಟ್ ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯುವರಾಜ್ ಮತ್ತು ರೈನಾ ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಈ ಫಿಟ್ ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ 21 ಅಂಕ ಗಳಿಸಬೇಕು.

ಯುವಿ, ರೈನಾ 16 ಅಂಕ ಗಳಿಸಲು ಶಕ್ತರಾಗಿದ್ದರಷ್ಟೇ. ಅಶ್ವಿನ್, ಜಡೇಜಾ, ಮನೀಶ್ ಪಾಂಡೆ ಹಾಗೂ ನಾಯಕ ಕೊಹ್ಲಿ 21 ಅಂಕ ಗಳಿಸಿದ್ದರು. ಉಳಿದ ಆಟಗಾರರು 19.5 ಅಂಕ ಗಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ದುಬೈಯಲ್ಲಿ ಗುರುವಾಗಲಿದ್ದಾರೆ ಧೋನಿ