Publish Date: Tue, 15 Aug 2017 (09:57 IST)
Updated Date: Tue, 15 Aug 2017 (10:00 IST)
ಮುಂಬೈ: ಯುವರಾಜ್ ಸಿಂಗ್ ರನ್ನು ತಂಡದಿಂದ ಕೊಕ್ ನೀಡಿದ ಆಯ್ಕೆಗಾರರು ಫಾರ್ಮ್ ನಲ್ಲಿ ಇಲ್ಲದಿದ್ದರೆ ಧೋನಿಗೂ ಯುವಿಯದ್ದೇ ಗತಿಯಾಗುತ್ತದೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಒಂದು ವೇಳೆ ಧೋನಿ ಆಡದಿದ್ದರೆ, ಅವರ ಸ್ಥಾನದ ಬಗ್ಗೆಯೂ ನಾವು ಚಿಂತನೆ ಮಾಡಬೇಕಾಗುತ್ತದೆ ಎಂದು ಆಯ್ಕೆಗಾರರ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.
ಈ ಮೂಲಕ ಧೋನಿಗೂ ಯಾವುದೇ ರಿಯಾಯಿತಿ ಇಲ್ಲ ಎಂದಿದ್ದಾರೆ. ಒಂದು ವೇಳೆ ಧೋನಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರೆ, ಅವರನ್ನು ನಾವೇಕೆ ಕೈ ಬಿಡಬೇಕು? ಎಲ್ಲರಿಗೂ ಅವಕಾಶ ಸಿಗಬೇಕು. ಭವಿಷ್ಯದ ದೃಷ್ಟಿಯಿಂದ ಉತ್ತಮ ತಂಡ ಕಟ್ಟಬೇಕು ಎನ್ನುವುದಷ್ಟೇ ನಮಗೆ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.