Select Your Language

Notifications

webdunia
webdunia
webdunia
webdunia

ಮಾರ್ಚ್ ನಲ್ಲಿ ಮತ್ತೆ ಟೀಂ ಇಂಡಿಯಾ-ಲಂಕಾ ಸರಣಿ

ಮಾರ್ಚ್ ನಲ್ಲಿ ಮತ್ತೆ ಟೀಂ ಇಂಡಿಯಾ-ಲಂಕಾ ಸರಣಿ
ಮುಂಬೈ , ಭಾನುವಾರ, 19 ನವೆಂಬರ್ 2017 (08:19 IST)
ಮುಂಬೈ: ಭಾರತ ಮತ್ತು ಶ್ರೀಲಂಕಾ ನಡುವೆ ಇತ್ತೀಚೆಗೆ ಪದೇ ಪದೇ ಸರಣಿಗಳು ನಡೆಯುತ್ತಿವೆ ಎಂಬ ಟೀಕೆಗಳ ಬೆನ್ನಲ್ಲೇ ಲಂಕಾ ಕ್ರಿಕೆಟ್ ಮಂಡಳಿ 2018 ರ ಮಾರ್ಚ್ ನಲ್ಲಿ ಉಭಯ ದೇಶಗಳ ನಡುವಿನ ಸರಣಿ ವೇಳಾಪಟ್ಟಿ ಪ್ರಕಟಿಸಿದೆ.
 

2018 ರ ಮಾರ್ಚ್ ನಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ತ್ರಿಕೋನ ಟಿ20 ಸರಣಿ ನಡೆಯಲಿದೆ. ಮಾರ್ಚ್ 8 ರಿಂದ 20 ರವರೆಗೆ ಈ ಸರಣಿ ನಡೆಯಲಿದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ಕೂಡಾ ಒಂದೇ ಎದುರಾಳಿಯ ಜತೆ ಪದೇ ಪದೇ ಆಡುವುದರಿಂದ ಅಭಿಮಾನಿಗಳು ಕ್ರಿಕೆಟ್ ಮೇಲೆ ಆಸಕ್ತಿ ಕಳೆದುಕೊಳ್ಳಬಹುದು. ಹೀಗಾಗಿ ಈ ಬಗ್ಗೆ ವಿಮರ್ಶೆ ನಡೆಸಬೇಕಾದ ಕಾಲ ಬಂದಿದೆ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ: ದ್ವಿಶತಕ ಸಿಡಿಸಿದ ಮನೀಶ್ ಪಾಂಡೆ