Publish Date: Sat, 18 Nov 2017 (08:22 IST)
Updated Date: Sat, 18 Nov 2017 (08:26 IST)
ರಾಂಚಿ: 2007 ರಲ್ಲಿ ಆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಪಕ್ವತೆ ಸಾಧಿಸುತ್ತಿದ್ದ ಧೋನಿ ಟೀಂ ಇಂಡಿಯಾದ ನಾಯಕನಾಗಿದ್ದು ಹೇಗೆ? ಈ ರಹಸ್ಯವನ್ನು ಸ್ವತಃ ಧೋನಿ ಬಹಿರಂಗಪಡಿಸಿದ್ದಾರೆ.
ಧೋನಿಗೆ ಅಂದು ನಾಯಕತ್ವ ಸಿಕ್ಕಿದ್ದು ಹೇಗೆ? ಸಂದರ್ಶನವೊಂದರಲ್ಲಿ ಮಾತನಾಡಿದ ಧೋನಿ ‘ಅಸಲಿಗೆ ಆ ಸಂದರ್ಭದಲ್ಲಿ ತಂಡವನ್ನು ಆಯ್ಕೆ ಮಾಡುವ ಸಭೆಯಲ್ಲಿ ನಾನು ಪಾಲ್ಗೊಂಡಿರಲೇ ಇಲ್ಲ. ಹಾಗಿದ್ದರೂ ನನ್ನನ್ನು ನಾಯಕನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಬಹುಶಃ ನನ್ನ ಚಿಂತನೆಗಳೇ ಇದಕ್ಕೆ ಕಾರಣವಾಗಿದ್ದಿರಬಹುದು. ಆಗ ನಾನು ಯುವ ಆಟಗಾರನಾಗಿದ್ದರೂ ಕೂಡಾ ಯಾವುದೇ ಹಿರಿಯ ಆಟಗಾರ ನನ್ನ ಬಳಿ ಪಂದ್ಯದ ಬಗ್ಗೆ ಏನೇ ಸೂಚನೆ ಕೇಳಿದರೂ ಕರಾರುವಕ್ಕಾಗಿ ಹೇಳುತ್ತಿದ್ದೆ. ಬಹುಶಃ ನನ್ನ ಈ ಗುಣ ಹಿರಿಯ ಆಟಗಾರರಿಗೆ ಇಷ್ಟವಾಗಿದ್ದಿರಬಹುದು. ಅದೇ ಕಾರಣಕ್ಕೆ ಬೇರೆ ಹಿರಿಯ ಆಟಗಾರರನ್ನು ಕಡೆಗಣಿಸಿ ಆಯ್ಕೆ ಸಮಿತಿ ನನ್ನನ್ನು ನಾಯಕನಾಗಿ ಮಾಡಿತು’ ಎಂದು ಧೋನಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ