Publish Date: Fri, 17 Nov 2017 (18:05 IST)
Updated Date: Fri, 17 Nov 2017 (18:09 IST)
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಹೆಮ್ಮೆಯ ಕುವರಿ ಪಿ.ವಿ.ಸಿಂಧು ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸಿಂಧು, ತಮ್ಮ ಚೀನಾ ಎದುರಾಳಿ ಗಾವೋ ಪಾಗ್ಜಿ ವಿರುದ್ಧ 11-21, 10-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಗೆದ್ದ ಗಾವೋ ಸೆಮಿಫೈನಲ್ ತಲುಪಿದ್ದಾರೆ.
ಸಿಂಧು 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಹನ್ ಯೂ ಅವರನ್ನು 21-15, 21-13 ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್ಫೈನಲ್ಗೆ ತಲುಪಿದ್ದರು. ಭಾರತದ ಸೈನಾ ನೆಹ್ವಾಲ್ ಮತ್ತು ಎಚ್.ಎಸ್. ಪ್ರಣಯ್ 2ನೇ ಸುತ್ತಿನ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ನಿರ್ಗಮಿಸಿದ್ದರು. (ಏಜೆನ್ಸೀಸ್)
ಭಾರತದ ಕ್ರೀಡಾಪಟು ಸೈನಾ ನೆಹ್ವಾಲ್ ಮತ್ತು ಎಚ್.ಎಸ್.ಪ್ರಣಯ್ ಈಗಾಗಲೇ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. ಸಿಂಧು ಸೋಲಿನಿಂದಾಗಿ ಪಂದ್ಯಾವಳಿಯಲ್ಲಿ ಭಾರತ ಸವಾಲ್ ಅಂತ್ಯಗೊಂಡಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.