Publish Date: Sat, 18 Nov 2017 (08:33 IST)
Updated Date: Sat, 18 Nov 2017 (08:34 IST)
ಚೆನ್ನೈ: ಮ್ಯಾಚ್ ಫಿಕ್ಸಿಂಗ್ ಕಳಂಕದ ನಿಷೇಧ ಶಿಕ್ಷೆ ಮುಗಿಸಿ ಈ ಬಾರಿಯ ಐಪಿಎಲ್ ಆವೃತ್ತಿಗೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳ ಒತ್ತಡಕ್ಕೆ ತಲೆ ಬಾಗಿದೆ.
ಕಳೆದ ಕೆಲವು ದಿನಗಳಿಂದ ಸುರೇಶ್ ರೈನಾರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯೋಜನೆ ಸಿಎಸ್ ಕೆಗೆ ಇಲ್ಲ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರೈನಾ ಇಲ್ಲದೆ ಸಿಎಸ್ ಕೆ ಇಲ್ಲ ಎಂದು ಅಭಿಮಾನಿಗಳು ಟ್ವಿಟರ್ ನಲ್ಲಿ ಒತ್ತಾಯ ಮಾಡಿದ್ದರು.
ಇದಕ್ಕೆ ಕೊನೆಗೂ ಪ್ರತಿಕ್ರಿಯಿಸಿರುವ ಸಿಎಸ್ ಕೆ ‘ಕಳೆದು ಕೆಲವು ದಿನಗಳಿಂದ ಹರಿದಾಡುತ್ತಿರುವ ರೂಮರ್ಸ್ ಎಲ್ಲಾ ಸುಳ್ಳು. ಚೆನ್ನೈ ಹೀರೋಗಳನ್ನು ಉಳಿಸಿಕೊಳ್ಳುವುದಿಲ್ಲ ಎಂಬ ಸುದ್ದಿಗಳೆಲ್ಲಾ ಸುಳ್ಳು. ನಮ್ಮ ಹೆಮ್ಮೆಯನ್ನು ಮರಳಿ ಪಡೆಯಲು ಇಷ್ಟಪಡುತ್ತೇವೆ’ ಎಂದು ಟ್ವೀಟ್ ಮಾಡಿದೆ. ಈ ಮೂಲಕ ರೈನಾರನ್ನು ಹೊರಗಿಡುವ ಸುದ್ದಿಗಳನ್ನು ಅಲ್ಲಗಳೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ