Publish Date: Mon, 20 Nov 2017 (09:31 IST)
Updated Date: Mon, 20 Nov 2017 (09:33 IST)
ಕೋಲ್ಕೊತ್ತಾ: ಡಿಆರ್ ಎಸ್ ಪಡೆಯಲು ಲಂಕಾ ಬ್ಯಾಟ್ಸ್ ಮನ್ ದಿಲ್ರುವಾನ್ ಪೆರೇರಾ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂಬ ಟೀಕೆಗಳಿಗೆ ಲಂಕಾ ಕ್ರಿಕೆಟ್ ಮಂಡಳಿ ಸ್ಪಷ್ಟನೆ ನೀಡಿದೆ.
ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಬಹುದು ಎಂದು ವೀಕ್ಷಕ ವಿವರಣೆಕಾರರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಭಾರತ ಆಟಗಾರರು ಯಾವುದೇ ದೂರು ನೀಡಿರಲಿಲ್ಲ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಲಂಕಾ ಕ್ರಿಕೆಟ್ ಮಂಡಳಿ ದಿಲ್ರುವಾನ್ ಡ್ರೆಸ್ಸಿಂಗ್ ರೂಂ ನೆರವು ಪಡೆದಿರಲಿಲ್ಲ. ನಾವು ಮೋಸದಾಟವಾಡಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ಲಂಕಾ ಬಳಿ ರಿವ್ಯೂ ಖಾಲಿಯಾಗಿದೆ ಎಂದು ತಪ್ಪಾಗಿ ತಿಳಿದು ದಿಲ್ರುವಾನ್ ಪೆವಿಲಿಯನ್ ಕಡೆ ಹೊರಟಿದ್ದರು. ಆದರೆ ರಂಗನಾ ಹೆರಾತ್ ಅಂಪಾಯರ್ ಬಳಿ ವಿಚಾರಿಸಿದಾಗ ಒಂದು ರಿವ್ಯೂ ಬಾಕಿಯಿರುವುದು ತಿಳಿದು ಮರಳಿ ಬಂದರು ಎಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ