Publish Date: Fri, 24 Nov 2017 (08:34 IST)
Updated Date: Fri, 24 Nov 2017 (08:35 IST)
ನಾಗ್ಪುರ: ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಲು ನಾಗ್ಪುರ ಮೈದಾನಕ್ಕೆ ಆಗಮಿಸಿದ ಟೀಂ ಇಂಡಿಯಾ ಮತ್ತು ಶ್ರೀಲಂಕಾ ತಂಡದ ನಾಯಕರಿಗೆ ಪಿಚ್ ನೋಡಿಯೇ ಗಾಬರಿಯಾಗಿದೆ.
ಅತ್ತ ಕೊಹ್ಲಿ ಹಸಿರು ಹೊದಿಕೆಯ ಪಿಚ್ ನೋಡಿದ ಮೇಲೆ ‘ಮುಂಬರುವ ದ.ಆಫ್ರಿಕಾ ಪ್ರವಾಸವನ್ನು ಗಮನದಲ್ಲಿಟ್ಟುಕೊಂಡು ಈ ವೇಗಿಗಳ ಸ್ವರ್ಗದ ಪಿಚ್ ನಲ್ಲಿ ಆಡದೇ ಬೇರೆ ವಿಧಿಯಿಲ್ಲ. ನಾವು ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದಿದ್ದಾರೆ.
ಅತ್ತ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಿಚ್ ನೋಡಿ ಆತಂಕವಾದರೂ, ಕೋಲ್ಕೊತ್ತಾದಷ್ಟು ಹುಲ್ಲು ಇರುವ ಪಿಚ್ ಇದಲ್ಲ. ಸ್ವಲ್ಪವಾದರೂ ಸ್ಪಿನ್ನರ್ ಗಳಿಗೆ ನೆರವಾಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ