Select Your Language

Notifications

webdunia
webdunia
webdunia
webdunia

ಪ್ಯಾಡ್‌ಮ್ಯಾನ್ ಚಾಲೆಂಜ್‌ಗೆ ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು

ಪ್ಯಾಡ್‌ಮ್ಯಾನ್ ಚಾಲೆಂಜ್‌ಗೆ ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೋ ಪ್ರಕಟಿಸಿದ ಸ್ಟಾರ್‌ಗಳು

ಅತಿಥಾ

ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (18:53 IST)
ಇದು ಭಾರತದಲ್ಲಿ ಇದೀಗ ನಡೆಯುತ್ತಿರುವ ಟ್ರೆಂಡಿಂಗ್ ಸವಾಲಾಗಿದೆ. ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅದಿತಿ ರಾವ್ ಹೈದರಿ, ಸೋನಮ್ ಕಪೂರ್, ನಟ ಅಮೀರ್ ಖಾನ್, ಅಕ್ಷಯ ಕುಮಾರ್ ಹೀಗೆ ಹಲವಾರು ಸ್ಟಾರ್‌ಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಪ್ಯಾಡ್‌ಮ್ಯಾನ್ ಚಾಲೆಂಜ್‌ ಎಂದು ಕರೆಯಲಾಗುತ್ತದೆ.
ತನ್ನ ಪತ್ನಿಯ ಋತುಸ್ರಾವದ ಸಮಯದಲ್ಲಿ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸಿ, ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸುವ ಯಂತ್ರವನ್ನೇ ಅಭಿವೃದ್ಧಿ ಪಡಿಸಿದ ಮುರುಗನಂತಂ ಕಥೆಯೇ ಪ್ಯಾಡ್‌ಮ್ಯಾನ್ ಸಿನಿಮಾ ರೂಪದಲ್ಲಿ ಇದೇ 9ರಂದು ತೆರೆಗೆ ಬರುತ್ತಿದೆ. ಇದೇ ಸಮಯದಲ್ಲಿ ಮಹಿಳೆಯ ಪರವಾಗಿ ನಿಲ್ಲುವಂತೆ, ಇದು ತಲೆತಗ್ಗಿಸುವ ಸಂಗತಿ ಅಲ್ಲ ಎಂಬುದನ್ನು ಸಮಾಜದ ಮುಂದಿಡಲು ಟ್ವಿಟರ್‌ನಲ್ಲಿ ಅರುಣಾಚಲಂ ಮುರುಗನಂತಂ ಫೆ.1ರಂದು ಪ್ಯಾಡ್‌ಮ್ಯಾನ್‌ ಸವಾಲನ್ನು ಪ್ಯಾಡ್‌ಮ್ಯಾನ್ ಚಿತ್ರದಲ್ಲಿ ನಟಿಸಿದ ಅಕ್ಷಯ ಕುಮಾರ್, ಸೋನಮ್ ಕಪೂರ್, ಟ್ವಿಂಕಲ್ ಖನ್ನಾ, ಮತ್ತು ರಾಧಿಕಾ ಆಪ್ಟೆ ಅವರಿಗೆ (#PadManChallenge) ಹಾಕಿದ್ದಾರೆ.
 
ಹೀಗೆ ಈ ತಾರೆಯರು ತಮ್ಮ ಸ್ನೇಹಿತರಿಗೆ ಈ ಚಾಲೆಂಜ್‌ ಅನ್ನು ಟ್ಯಾಗ್ ಮಾಡುವ ಮೂಲಕ ವ್ಯಾಪಕ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

'ಆಶಿಕ್ ಬನಾಯಾ ಆಪ್‌ನೆ' ಹಾಡಿನಲ್ಲಿ ಹಾಟ್ ಆಗಿ ಮಿಂಚುತ್ತಿರುವ ಊರ್ವಶಿ ರೌಟೇಲಾ..!!