Select Your Language

Notifications

webdunia
webdunia
webdunia
webdunia

ಶಾರುಖ್ ಇರುವ ಸೆಟ್ ನಲ್ಲಿ ಯಾರಿಗೂ ಹುಡುಗಿಯರನ್ನು ಟಚ್ ಮಾಡಲೂ ಧೈರ್ಯವಿರಲ್ವಂತೆ!

ಶಾರುಖ್ ಇರುವ ಸೆಟ್ ನಲ್ಲಿ ಯಾರಿಗೂ ಹುಡುಗಿಯರನ್ನು ಟಚ್ ಮಾಡಲೂ ಧೈರ್ಯವಿರಲ್ವಂತೆ!
ಮಂಬೈ , ಗುರುವಾರ, 1 ಫೆಬ್ರವರಿ 2018 (09:23 IST)
ಮಂಬೈ: ಸಿನಿಮಾ ರಂಗದಲ್ಲಿ ಇತ್ತೀಚೆಗೆ ಕೆಲವು ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನಟ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ.
 

ನಿಮ್ಮ ಸೆಟ್ ನಲ್ಲಿ ಯಾವಾಗಲಾದರೂ ನಟಿಯರು ಅಥವಾ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳವಾದ ಅನುಭವವಾಗಿದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಶಾರುಖ್ ಹೇಳಿದ್ದೇನು ಗೊತ್ತಾ?

‘ವೈಯಕ್ತಿಕವಾಗಿ ನಾನು ಯಾವತ್ತೂ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿಲ್ಲ. ಹಾಗೆಯೇ ನನ್ನ ಸಿನಿಮಾ ಸೆಟ್ ನಲ್ಲೂ ಅಂತಹ ಘಟನೆಗಳಾಗಿಲ್ಲ. ನಾನು ಮಹಿಳೆಯರನ್ನು ಗೌರವಿಸುತ್ತೇನೆ ಮತ್ತು ಕೆಲಸದಲ್ಲಿ ಅವರನ್ನೂ ಸಮಾನತೆಯಿಂದ ನೋಡುತ್ತೇನೆ. ನಾನು ಸೆಟ್ ನಲ್ಲಿರುವಾಗ ಮತ್ತು ನನ್ನ ಸಿನಿಮಾ ಸೆಟ್ ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಲು ಯಾರೂ ಧೈರ್ಯ ಮಾಡುವುದಿಲ್ಲ’ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಾನವೀಯತೆ ಮೆರೆದ ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು