Select Your Language

Notifications

webdunia
webdunia
webdunia
webdunia

ಕತ್ರಿನಾ ಕೈಫ್, ಸ್ನೇಹಿತೆ ಆಲಿಯಾ ಭಟ್ ವಿವಾಹಕ್ಕಾಗಿ ಕಾಯುತ್ತಿದ್ದಾರಾ?

ಕತ್ರಿನಾ ಕೈಫ್, ಸ್ನೇಹಿತೆ ಆಲಿಯಾ ಭಟ್ ವಿವಾಹಕ್ಕಾಗಿ ಕಾಯುತ್ತಿದ್ದಾರಾ?

ಅತಿಥಾ

ಬೆಂಗಳೂರು , ಶನಿವಾರ, 3 ಫೆಬ್ರವರಿ 2018 (13:57 IST)
ಎರಡು ಪ್ರಮುಖ ಮಹಿಳೆಯರ ಬಾಲಿವುಡ್‌ನಲ್ಲಿ ಕಣ್ಣಿಗೆ ಕಣ್ಣು ಹಾಕಿ ನೋಡಲು ಸಾಧ್ಯವಾಗದ ದಿನಗಳು ಹಳೆಯದಾಗಿವೆ. ಬಿ-ಟೌನ್‌ನಲ್ಲಿ ತಮ್ಮ ಸ್ನೇಹಿತೆಯನ್ನು ತೋರಿಸಿಕೊಳ್ಳುವ ಕಾಲಬಂದಿದೆ! ಹಿಂದಿ ಚಲನಚಿತ್ರೋದ್ಯಮದಲ್ಲಿ ಕರೀನಾ ಕಪೂರ್-ಅಮೃತಾ ಅರೋರಾ, ಸೋನಮ್ ಕಪೂರ್-ಜಾಕ್ವೆಲಿನ್ ಫೆರ್ನಾಂಡಿಸ್, ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಹೀಗೆ ನಟಿಯರ ಸ್ನೇಹದ ಚರ್ಚೆ ಬಹಳ ಸಮಯದಿಂದ ನಡೆಯುತ್ತಲೇ ಇದೆ.
ಸೆಲೆಬ್ರಿಟಿ ಚಾಟ್ ಕಾರ್ಯಕ್ರಮ 'ಬಿಎಫ್ಎಫ್ಸ್ ವಿಥ್ ವೋಗ್' ಸೀಸನ್ ಎರಡು ಈಗ ಮತ್ತೆ ಬಂದಿದೆ ಮತ್ತು ಈ ಬಾರಿ ನೇಹಾ ಧುಪಿಯಾ ಕಾರ್ಯಕ್ರಮದ ಹೋಸ್ಟ್ ಆಗಿದ್ದಾರೆ. ದೀಪಿಕಾ ಪಡುಕೋಣೆ ತನ್ನ ಸಹೋದರಿ ಆನಿಷಾ ಜೊತೆಗೆ ಕಾರ್ಯಕ್ರಮದಲ್ಲಿ ಕುತೂಹಲಕಾರಿ ವಿಷಯವನ್ನು ಬಹಿರಂಗಪಡಿಸಿದ ನಂತರ, ಎರಡನೇ ಸಂಚಿಕೆಯಲ್ಲಿ ಕತ್ರಿನಾ ಮತ್ತು ಅಲಿಯಾ ಭಟ್ ಕಾರ್ಯಕ್ರಮದ ಬಂದಿದ್ದರು.
 
ಅಲಿಯಾ ಮತ್ತು ಕತ್ರಿನಾ ಇಬ್ಬರೂ ಫಿಟ್ನೆಸ್ ಫ್ರೀಕ್‌ಗಳಾಗಿದ್ದರೆ, ಮತ್ತು ನಾವು ಈ ಹುಡುಗಿಯರನ್ನು ಒಟ್ಟಾಗಿ ಜಿಮ್‌ನಲ್ಲಿ ಬೆವರು ಸುರಿಸುತ್ತಿರುವುದನ್ನು ನೋಡಿದ್ದೇವೆ. ಕಬ್ಬಿಣದ ರಾಡ್‌ಗಳನ್ನು ಹಿಡಿದು ಇವರಿಬ್ಬರು ಪಂಪ್ ಮಾಡುವ ಹಲವಾರು ವೀಡಿಯೊಗಳು ವೈರಲ್ ಆಗಿವೆ.
 
ಕಾರ್ಯಕ್ರಮದಲ್ಲಿ ಕತ್ರಿನಾಗೆ ಸಲಹೆ ನೀಡುತ್ತಾ, ಅಲಿಯಾ "ಜಿಮ್ ಅನ್ನು ಬಿಟ್ಟು ಪುರುಷರ ಮೇಲೆ ಗಮನ ಹರಿಸು" ಎಂದು ಹೇಳಿದ್ದರು, ಅದಕ್ಕೆ ಉತ್ತರಿಸುತ್ತಾ "ಅಲಿಯಾ ಯಾವಾಗ ಮದುವೆಯಾಗಲಿದ್ದಾಳೆ ಎಂದು ನಾನು ಕಾಯುತ್ತಿದ್ದೇನೆ "ಎಂದು ಹೇಳಿದ್ದಾರೆ. 
 
ಹಾಗೇ, ಹೋಸ್ಟ್ ನೇಹಾ ಧುಪಿಯಾ ಅವರು ಪರಸ್ಪರರಗೆ ಕಿರಿಕಿರಿ ಉಂಟುಮಾಡುವ ಒಂದು ವಿಷಯವನನ್ನು ಕೇಳಿಕೊಂಡರು. ಅಲಿಯಾ ಅವರು, "ಕತ್ರಿನಾ ಬಗ್ಗೆ ನನಗೆ ಕಿರಿಕಿರಿಯುಂಟುಮಾಡುವ ಒಂದು ವಿಷಯವೆಂದರೆ ಅವಳು ಎಂದಿಗೂ ಯೋಜನೆಗಳಿಗೆ ಬದ್ಧಳಾಗಿರುವುದಿಲ್ಲ" ಎಂದು ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಥಗ್ಸ್ ಆಫ್ ಹಿಂದೂಸ್ಥಾನ್: ಕತ್ರಿನಾ ಕೈಫ್‌ಳ ವೀಡಿಯೋ ನೋಡಿದ್ರೆ ದಂಗಾಗುವಿರಿ