Publish Date: Sat, 03 Feb 2018 (13:43 IST)
Updated Date: Sat, 03 Feb 2018 (13:46 IST)
ಬೆಳ್ಳಿ ಪರದೆಗೆ ಪ್ರವೇಶಿಸುವ ಮೊದಲೇ ರಣಬೀರ್ ಕಪೂರ್ ತಮ್ಮ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ ಎಂದು ಆಲಿಯಾ ಭಟ್ ವ್ಯಕ್ತಪಡಿಸಿದ್ದರು. ವಿಷ್ಯಾ ಏನಂದರೆ ತಮ್ಮ ಮೆಚ್ಚಿನ ನಾಯಕರಾದ ರಣಬೀರ್ ಕಪೂರ್ ಅವರ ಜೊತೆಗೆ 'ಬ್ರಹ್ಮಸ್ತ್ರಾ' ಎಂಬ ಶೀರ್ಷಿಕೆಯ ಟ್ರೈಲಾಜಿ ಚಿತ್ರದಲ್ಲಿ ಆಲಿಯಾ ನಟಿಸಲು ಸಿದ್ಧರಾಗಿದ್ದಾಗಿರೆ.
ಅದೇನಿದ್ದರೂ, ಚಿತ್ರಕ್ಕಿಂತ ಹೆಚ್ಚಾಗಿ, ಈ ಎರಡು ತಾರೆಯರ ನಡುವೆ ಬೆಳೆಯುತ್ತಿರುವ ಗೆಳೆತನದ ಕುರಿತು ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಈ ಜೋಡಿಯು ಕೆಲವು ದಿನಗಳಿಂದ ಜೊತೆಯಾಗಿ ಕಾಣಿಸಿಕೊಳ್ಳುತ್ತಿದೆ. ಶೂಟಿಂಗ್ ಇಲ್ಲದಿದ್ದಾಗ ಸಹ, ರಣಬೀರ್ ಆಲಿಯಾ ಜೊತೆಯಲ್ಲಿರಲು ಬಯಸುತ್ತಾರಂತೆ.
ಇತ್ತೀಚೆಗೆ, ಇಬ್ಬರೂ ಟೆಲ್ ಅವಿವ್ನಲ್ಲಿದರು ಎಂಬ ವದಂತಿಗಳು ಇದ್ದವು. ಆದರೆ ಬ್ರಹ್ಮಸ್ತದ ನಿರ್ದೇಶಕ ಅಯಾನ್ ಮುಖರ್ಜಿ ಸಹ ಅವರೊಂದಿಗೆ ಅಲ್ಲಿದ್ದರು. ಇದೀಗ, ಇತ್ತೀಚಿನ ವರದಿಗಳು ಅವರು ಪರಸ್ಪರ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ, ಎಂದು ತಿಳಿಸಿದೆ.
ಈ ವಾರದ ಪ್ರಾರಂಭದಲ್ಲಿ, 'ರಾಕ್ಸ್ಟಾರ್' ನಟ ಅಲಿಯಾಳ ಮನೆಗೆ ರಾತ್ರೆ 11 ಗಂಟೆಗೆ ಬಂದು ಮರುದಿನ ಬೆಳಗ್ಗೆ 7 ಗಂಟೆಗೆ ಹೊರಟಿದ್ದರಂತೆ.
ಆಲಿಯಾ, ರಣಬೀರ್ನ ಮಾಜಿ ಗೆಳತಿಯಾದ ಕತ್ರಿನಾ ಕೈಫ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ಬಿಎಫ್ಎಫ್ ವಿಥ್ ವೊಗ್ ಎಂಬ ಕಾರ್ಯಕ್ರಮದಲ್ಲಿ ಕತ್ರಿನಾಗೆ ಸಲಹೆ ನೀಡುತ್ತಾ, ಅಲಿಯಾ "ಜಿಮ್ ಅನ್ನು ಬಿಟ್ಟು ಪುರುಷರ ಮೇಲೆ ಗಮನ ಹರಿಸು" ಎಂದು ಹೇಳಿದ್ದರು, ಅದಕ್ಕೆ ಉತ್ತರಿಸುತ್ತಾ "ಅಲಿಯಾ ಯಾವಾಗ ಮದುವೆಯಾಗಲಿದ್ದಾಳೆ ಎಂದು ನಾನು ಕಾಯುತ್ತಿದ್ದೇನೆ "ಎಂದು ಹೇಳಿದ್ದಳು.
ರಣಬೀರ್ ಜೊತೆಗೆ ಬೆಳೆಯುತ್ತಿರುವ ಅಲಿಯಾಳ ನಿಕಟತೆಯು ಎರಡು ಆತ್ಮೀಯ ಸ್ನೇಹಿತರ ನಡುವೆ ಘರ್ಷಣೆಯನ್ನು ಉಂಟುಮಾಡಲಿದಿಯೇ ಎಂದು ಕಾದು ನೋಡಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.