Select Your Language

Notifications

webdunia
webdunia
webdunia
webdunia

ಮಗನನ್ನು ಝೀರೊ ಸೈಜ್ ಮಾಡಲು ನಟಿ ಕರೀನಾ ಕಪೂರ್ ಮಾಡಿದ್ದಾದರು ಏನು ಗೊತ್ತಾ...?

ಮಗನನ್ನು ಝೀರೊ ಸೈಜ್ ಮಾಡಲು ನಟಿ ಕರೀನಾ ಕಪೂರ್ ಮಾಡಿದ್ದಾದರು ಏನು ಗೊತ್ತಾ...?
ಮುಂಬೈ , ಶನಿವಾರ, 3 ಫೆಬ್ರವರಿ 2018 (05:47 IST)
ಮುಂಬೈ : ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಝೀರೊ ಸೈಜ್ ನಟಿ ಎಂದೇ ಪ್ರಖ್ಯಾತಿ ಪಡೆದಿದ್ದು, ಈಗ ತಮ್ಮ ಒಂದು ವರ್ಷದ ಮಗ  ತೈಮೂರ್‌ ಆಲಿ ಖಾನ್‌ನನ್ನೂ ಜಿಮ್‌ಗೆ ಸೇರಿಸಿ ಟೀಕೆಗೆ ಗುರಿಯಾಗಿದ್ದಾರೆ.

 
ತಮ್ಮ ಮಗ ತೈಮೂರ್‌ ಆಲಿ ಖಾನ್‌ನನ್ನೂ ಮುಂಬಯಿಯಲ್ಲಿರುವ ಫಿಟ್‌ನೆಸ್‌ ಸೆಂಟರ್‌ಗೆ ಸೇರಿಸಿರುವ ಕರೀನಾ ಅವರು  ಆ ಕುರಿತ ಫೋಟೊವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲದೆ ಆ ಸೆಂಟರ್‌ನ ಹೊರಗಡೆ ತೈಮೂರ್‌ ಆಲಿ ಖಾನ್‌ ಇರುವ ಫೋಟೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


ಕರೀನಾ ಕಪೂರ್‌ ಅವರು ಈ ರೀತಿ ಮಾಡಿರುವುದಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಟ್ವಿಟ್ಟಿಗರು ಅವರ ಮೇಲೆ ಹರಿಹಾಯ್ದಿದ್ದು, ಕರೀನಾ ತಮ್ಮ ಎಳೆ ಮಗನನ್ನೂ ಸೈಜ್‌ ಝೀರೊ ಮಾಡಲು ಹೊರಟಿರುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಕೆಲವರು ಪುಟಾಣಿ ತೈಮೂರ್‌ ಜಿಮ್‌ನಲ್ಲಿ ಭಾರದ ಸಲಕರಣೆ ಎತ್ತುವಂತಿರುವ ಮೆಮೇ ಮತ್ತು ಫನ್‌ ಮೆಸೇಜ್‌ಗಳನ್ನು ಪೋಸ್ಟ್‌ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

150 ಕೋಟಿ ಗಳಿಕೆಯ ಸನಿಹದಲ್ಲಿ 'ಪದ್ಮಾವತ್'