Publish Date: Fri, 02 Feb 2018 (19:20 IST)
Updated Date: Fri, 02 Feb 2018 (19:23 IST)
ಭಾರತದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾದ ಗಳಿಕೆಯನ್ನು ಮುಂದುವರಿಸುತ್ತಿರುವ 'ಪದ್ಮಾವತ್', ಒಂಬತ್ತು ದಿನಗಳಲ್ಲಿ ರೂ 142 ಕೋಟಿ ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ರೂ. 150 ಕೋಟಿಯನ್ನು ತಲುಪುವುದರಲ್ಲಿದೆ, ಎಂದು ವ್ಯಾಪಾರ ಮೂಲಗಳಿಂದ ಬುಧವಾರದಂದು ತಿಳಿದುಬಂದಿದೆ.
ಬಿಡುಗಡೆಯ ಮೊದಲ ವಾರಾಂತ್ಯದಲ್ಲಿ ಬೃಹತ್ ಗಳಿಕೆಯ ದಾಖಲೆಯನ್ನು ಮಾಡಿದ ನಂತರ, ಒಂಬತ್ತನೆಯ ದಿನದಂದು ರೂ 13 ಕೋಟಿ ಗಳಿಸುವ ಮೂಲಕ ವಾರದ ದಿನಗಳಲ್ಲಿಯೂ ಸಹ ಗಳಿಕೆಯನ್ನು ಮುಂದುವರಿಸಿದೆ.
ಇದು ಸೇರಿದಂತೆ ಚಿತ್ರದ ಒಟ್ಟಾರೆ ಗಳಿಕೆ ರೂ 142 ಕೋಟಿ. ಚಿತ್ರವನ್ನು ಬಿಡುಗಡೆ ಮಾಡಬಾರದೆಂದು ತೀರ್ಮಾನಿಸಿದ ನಾಲ್ಕು ರಾಜ್ಯಗಳ ಚಿತ್ರಮಂದಿರಗಳು ಸೇರಿದಂತೆ, ಸೀಮಿತ ಬಿಡುಗಡೆಯ ಹೊರತಾಗಿಯೂ, 'ಪದ್ಮಾವತ್' ಅತ್ಯುತ್ತಮವಾಗಿ ಗಳಿಸಿದೆ.
ಪದ್ಮಾವತ್' ಚಿತ್ರದ ಚಿತ್ರಮಂದಿರಗಳಲ್ಲಿನ ಮುಂದುವರಿದ ನೂಕುನುಗ್ಗಲನ್ನು ಪರಿಗಣಿಸಿದರೆ, ಬಿಡುಗಡೆ ವಾರದ ವಾರಾಂತ್ಯದವರೆಗೆ ರೂ 150 ಕೋಟಿ ಮೀರಿಸಲಿದೆ ಮತ್ತು ರೂ 200 ಕೋಟಿ ಕ್ಲಬ್ ದಾಟುವ ಸೂಚನೆಗಳಿವೆ ಎಂದು ವ್ಯಾಪಾರ ಮೂಲಗಳು ಹೇಳುವೆ.
ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ, ಶಾಹಿದ್ ಕಪೂರ್ ರಜಪೂತ ರಾಜ ಮಹಾರಾವಲ್ ರತನ್ ಸಿಂಗ್ ಮತ್ತು ರಣವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಜನವರಿ 25 ರಂದು ಬಿಡುಗಡೆಯಾದ ದಿನದಿಂದ ಈ ಚಿತ್ರವು ಹೆಚ್ಚಿನ ಜನರನ್ನು ಸೆಳೆಯುತ್ತಿದೆ.
ಈ ಚಿತ್ರದಲ್ಲಿ ಅದಿತಿ ರಾವ್ ಹೈದರಿ, ಜಿಮ್ ಸರ್ಬ್, ರಝಾ ಮುರಾದ್ ಮತ್ತು ಅನುಪ್ರಿಯ ಗೋಯೆಂಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.