Publish Date: Thu, 15 Feb 2018 (13:19 IST)
Updated Date: Fri, 16 Feb 2018 (12:51 IST)
ಪಡ್ಡೆಗಳ ಹೃದಯ ಕದ್ದ ಚೋರಿ ಮಲಯಾಳಂನ ಒರು ಆದಾರ್ ಲವ್ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ಮತ್ತೊಂದು ವಿಡಿಯೋ ಇದೀಗ ಇಂಟರ್ನೆಟ್ ಸೆನ್ಸೇಶನ್ ಆಗುತ್ತಿದೆ. ಇದೀಗ ಪ್ರಿಯಾ ನಟನೆಯ ಒರು ಅಡರ್ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ.
ಈ ಟೀಸರ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸೋದ್ರಲ್ಲಿ ಅನುಮಾನವೇ ಇಲ್ಲ. ಆ ಹಾಡಿನಲ್ಲಿ ಗೆಳೆಯನಿಗೆ ಕಣ್ಣು ಹೊಡೆದಿದ್ದ ಪ್ರಿಯಾ, ಟೀಸರ್ ನಲ್ಲಿ ಹ್ಯಾಂಡ್ ಗನ್ ಮೂಲಕ ಸಿಹಿ ಮುತ್ತು ಕಳಿಸಿಕೊಟ್ಟಿದ್ದಾಳೆ.
ಒರು ಅಡರ್ ಲವ್, ಒಮರ್ ಲುಲು ಬರೆದು ನಿರ್ದೇಶಿಸಿದ ಮುಂಬರುವ ಮಲಯಾಳಂ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಟಿಸಿರುವ ನಾಯಕ ಮತ್ತು ನಾಯಕಿಯ ಮೊದಲ ಸಿನೆಮಾ ಆಗಿದೆ. ಶಾನ್ ರಹಮಾನ್ ನಿರ್ದೇಶಿಸಿದ ಹಾಡು ಮಾಣಿಕ್ಯ ಮಲರೈ ಪೂವಿ 10 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ, ಈ ಮೊದಲು ಯಾವುದೇ ಮಲಯಾಲಮ್ ಹಾಡು ಇಷ್ಟು ಜನಪ್ರೀಯವಾಗಿರಲಿಲ್ಲ.
"ಇದು ಈ ಮಟ್ಟಕ್ಕೆ ವೈರಲ್ ಆಗಿ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ತಲುಪಿತ್ತದೆ ಎಂದು ನಿರೀಕ್ಷಿಸಿರಲಿಲ್ಲ" ಎಂದು ಅವರು ಹೇಳಿದರು.
ಆಕೆ ತನ್ನ ಅಭಿಮಾನಿಗಳಿಗೆ "ನಾನು ತುಂಬಾ ಖುಷಿಯಿಂದಿದ್ದೇನೆ ಮತ್ತು ಅವರ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ನೀಡಲು ಬಯಸುತ್ತೇನೆ, ಚಲನಚಿತ್ರ ಬಿಡುಗಡೆಯಾದಾಗ ಸಹ ನಿಮ್ಮೆಲ್ಲರ ಪ್ರೀತಿ ಹೀಗೆ ಮುಂದುವರಿಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು. ಹಾಗೆ ತನ್ನ ಮೊದಲ ಚಲನಚಿತ್ರ ಉತ್ತಮ ಫಲಿತಾಂಶ ಬಂದ ನಂತರ ನಾನು ಹೊಸ ಚಿತ್ರಕ್ಕೆ ಸಹಿ ಹಾಕುತ್ತೇನೆ ಎಂದು ಹೇಳಿದರು.