Select Your Language

Notifications

webdunia
webdunia
webdunia
webdunia

ಅನುಷ್ಕಾ ಶರ್ಮಾ 'ಪರಿ' ಟೀಸರ್ ನಿಮ್ಮ ನಿದ್ದೆ ಕೆಡಿಸಬಹುದು !!

ಅನುಷ್ಕಾ ಶರ್ಮಾ
ಬಾಲಿವೂಡ್ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ 'ಪರಿ' ಎಂಬ ಹಾರರ್ ಸಿನೇಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ಇದು ಅವರ ಮೊದಲ ಹಾರರ್ ಚಿತ್ರವಾಗಿದೆ. ಪಕ್ಕಾ ರೋಮ್ಯಾಂಟಿಕ್ ಚಿತ್ರಗಳಲ್ಲಿ ಅಭಿನಯಿಸಿದ್ದ ಈ ಚತುರೆ, ಇದೀಗ ಹಾರರ್ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದಾಳೆ.
ಈ ಚಿತ್ರದ ಮೊದಲ ಟಿಸರ್ 2017 ರ ಜುಲೈನಲ್ಲಿ ಬಿಡುಗಡೆಯಾಗಿದ್ದು, ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ಚಿತ್ರತಂಡ ಫೆಬ್ರುವರಿ 9 ರಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.
 
ಈ ಚಿತ್ರವನ್ನು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದು, ಮೇಕಪ್ ಇಲ್ಲದೇ ವಿಕಾರವಾದ ಮುಖದೊಂದಿಗೆ ಭಯ ಬಿಳಿಸುವಂತ ಹಾರರ್ ಲೂಕ್‌ನಲ್ಲಿ ಅನುಷ್ಕಾ ಕಾಣಿಸಿಕೊಂಡಿರುವುದು ಇನ್ನಷ್ಟು ಅಭಿಮಾನಿಗಳ ಕುತುಹಲಕ್ಕೆ ಕಾರಣವಾಗಿದೆ. ಈ ಮೊದಲು ಎನ್‌ಎಚ್ 10 ಮತ್ತು ಫಿಲ್ಲೌರಿ ಸಿನೇಮಾವನ್ನು ಅನುಷ್ಕಾ ನಿರ್ಮಾಣ ಮಾಡಿದ್ದು, "ಪರಿ" ಅವರ ನಿರ್ಮಾಣದ ಮೂರನೇ ಸಿನೇಮಾವಾಗಿದೆ. 
 
ಈ ಚಿತ್ರಕ್ಕೆ ಪ್ರೋಸಿತ್ ರಾಯ್ ಎಕ್ಷನ್ ಕಟ್ ಹೇಳುತ್ತಿದ್ದು, ಅನುಪಮ್ ರಾಯ್ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‌ ಮೂಲಕ ಬಾರಿ ಕೂತುಹಲ ಕೆರಳಿಸಿರುವ ಈ ಸಿನೇಮಾ ಪ್ರೇಕ್ಷಕರನ್ನು ಯಾವ ರೀತಿ ಸೆರೆಹಿಡಿಯಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ಕಟ್ಟದ ಬಾಲಿವುಡ್ ತಾರೆಯನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!