ಮುಂಬೈ: ಅನುಷ್ಕಾ ಶರ್ಮಾ ಅವತಾರ ನೋಡಿ ಪತಿ ವಿರಾಟ್ ಕೊಹ್ಲಿಗೆ ಭಯವಾಗಿದೆಯಂತೆ! ಅಷ್ಟಕ್ಕೂ ವಿಶ್ವದ ಘಟಾನುಘಟಿ ಬೌಲರ್ ಗಳ ಎದೆ ನಡುಗಿಸುವ ಕೊಹ್ಲಿಗೇ ಭಯ ಹುಟ್ಟಿಸಲು ಅನುಷ್ಕಾ ಏನು ಮಾಡಿದ್ರು?
 
ಅದಕ್ಕೆಲ್ಲಾ ಕಾರಣ ಅನುಷ್ಕಾ ಅಭಿನಯದ ಪರಿ ಚಿತ್ರದ ಟ್ರೈಲರ್ ನೋಡಿ ವಿರಾಟ್ ಕೊಹ್ಲಿ ಈ ರೀತಿ ಕಾಮೆಂಟ್ ಮಾಡಿದ್ದಾರೆ. ಅನುಷ್ಕಾ ಮುಖದ ತುಂಬಾ ಗಾಯ, ಕಣ್ಣಲ್ಲಿ ರಕ್ತ ಕಣ್ಣೀರು, ವಿಲಕ್ಷಣ ನಗು ನೋಡಿದರೆ ಎಂತಹವರಿಗೂ ಭಯ ಹುಟ್ಟದೇ ಇರದು!
									
			
			 
 			
 
 			
			                     
							
							
			        							
								
																	ಇದೀಗ ಕೊಹ್ಲಿಗೂ ಅದೇ ಆಗಿದೆ.  ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಕೊಹ್ಲಿ ‘ನನ್ನ ಒನ್ ಆಂಡ್ ಓನ್ಲೀಯ ಹೊಸ ಅವತಾರ ನೋಡಲು ಇನ್ನೂ ಕಾಯಲಾರೆ. ನೋಡಿದರೇ ಭಯವಾಗುತ್ತೆ. ಇವಳನ್ನು ಹಿಂದೆಂದೂ ಹೀಗೆ ನೋಡಿಲ್ಲ’ ಎಂದು ಕೊಹ್ಲಿ ಮೆಚ್ಚುಗೆಯಿಂದಲೇ ಕಾಮೆಂಟ್ ಮಾಡಿದ್ದಾರೆ.
									
										
										
								
																	 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ