Publish Date: Tue, 13 Feb 2018 (16:43 IST)
Updated Date: Tue, 13 Feb 2018 (16:45 IST)
ಪೋರ್ಟ್ ಎಲಿಜಬೆತ್: ಭಾರತ ಮತ್ತು ದ. ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ರಿಕಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಇದರಿಂದಾಗಿ ಚೇಸಿಂಗ್ ಮಾಡುವ ಅವಕಾಶ ಭಾರತದ ಕೈ ತಪ್ಪಿದೆ.
ಅಷ್ಟೇ ಅಲ್ಲದೆ, ಮತ್ತೆ ವಿರಾಟ್ ಕೊಹ್ಲಿ ಟಾಸ್ ವಿಚಾರದಲ್ಲಿ ತಾವು ಅನ್ ಲಕ್ಕೀ ಎಂದು ಸಾಬೀತುಪಡಿಸಿದ್ದಾರೆ. ಈ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರಲ್ಲಿ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯುತ್ತಿದೆ.
ರೋಹಿತ್ ಶರ್ಮಾ ಕಳಪೆ ಪ್ರದರ್ಶನದ ಹೊರತಾಗಿಯೂ ಅವರಿಗೆ ಮತ್ತೊಂದು ಅವಕಾಶ ನೀಡಲು ಕೊಹ್ಲಿ ನಿರ್ಧರಿಸಿದ್ದಾರೆ. ಈ ಪಂದ್ಯ ಗೆದ್ದರೆ ಸರಣಿ ಭಾರತದ ವಶವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ