Publish Date: Mon, 12 Feb 2018 (09:15 IST)
Updated Date: Mon, 12 Feb 2018 (09:18 IST)
ಬೆಂಗಳೂರು: ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಬೇಸತ್ತಿದ್ದ ಕೆಎಲ್ ರಾಹುಲ್ ಕೊನೆಗೂ ಲಯಕ್ಕೆ ಮರಳಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದಾರೆ.
ಆ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡಿದ್ದಾರೆ. ಹಾಗಿದ್ದರೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ ಗೆಲುವು ತಂದುಕೊಡಲು ವಿಫಲರಾಗಿದ್ದಾರೆ. ಪಂಜಾಬ್ ಪರ ಅಂಡರ್ 19 ವಿಶ್ವಕಪ್ ಹೀರೋ ಶುಬ್ಮನ್ ಗಿಲ್ 123 ರನ್ ಹೊಡೆದು ತಮ್ಮ ತಂಡಕ್ಕ ಜಯ ಒದಗಿಸಿದ್ದಾರೆ.
ಹಾಗಿದ್ದರೂ ವೈಯಕ್ತಿಕವಾಗಿ ರಾಹುಲ್ ಗೆ ಈ ಇನಿಂಗ್ಸ್ ತೃಪ್ತಿಕೊಡಲಿದೆ. ಆಫ್ರಿಕಾ ವಿರುದ್ಧ ಟಿ20 ಸರಣಿ ಆಡುವ ಮೊದಲು ಹಳೆಯ ಲಯಕ್ಕೆ ಬರಬೇಕೆಂಬುದು ಅವರ ಗುರಿಯಾಗಿತ್ತು. ಅದೀಗ ಈಡೇರಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ