Publish Date: Sun, 11 Feb 2018 (08:19 IST)
Updated Date: Sun, 11 Feb 2018 (08:22 IST)
ಕರಾಚಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸರಿ ಇಲ್ಲದೇ ಇರಬಹುದು. ಆದರೆ ರಾಜಕೀಯ ಕಾರಣಗಳಿಗಾಗಿ ಈ ಎರಡೂ ರಾಷ್ಟ್ರಗಳ ನಡುವೆ ಇರುವ ಧ್ವೇಷ ಕೊಹ್ಲಿ ಮತ್ತು ನನ್ನ ಸ್ನೇಹ ಹಾಳು ಮಾಡದು ಎಂದು ಪಾಕ್ ಕ್ರಿಕೆಟಿಗ ಶಾಹಿದ್ ಅಪ್ರಿದಿ ಹೇಳಿಕೊಂಡಿದ್ದಾರೆ.
‘ರಾಜಕೀಯ ನಮ್ಮಿಬ್ಬರ ಸ್ನೇಹ ಹಾಳು ಮಾಡದು. ವಿರಾಟ್ ಅದ್ಭುತ ವ್ಯಕ್ತಿ. ಅವರು ಕ್ರಿಕೆಟ್ ನ ಅದ್ಭುತ ರಾಯಭಾರಿ. ನನ್ನ ಫೌಂಡೇಶನ್ ಗಾಗಿ ಕೊಹ್ಲಿ ಸಹಿ ಮಾಡಿದ ಜೆರ್ಸಿ ಕೊಟ್ಟಿದ್ದರು. ಕೊಹ್ಲಿ ಯಾವತ್ತೂ ಗೌರವದಿಂದಲೇ ನಡೆದುಕೊಂಡಿದ್ದಾರೆ’ ಎಂದು ಅಫ್ರಿದಿ ಹೊಗಳಿದ್ದಾರೆ.
ಇತ್ತೀಚೆಗೆ ಕೊಹ್ಲಿ ಮದುವೆಯಾದಾಗ, ಶತಕ ಗಳಿಸಿದಾಗಲೆಲ್ಲಾ ಅಫ್ರಿದಿ ಕೊಹ್ಲಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ