Publish Date: Fri, 09 Feb 2018 (10:51 IST)
Updated Date: Fri, 09 Feb 2018 (10:53 IST)
ಕೋಲ್ಕೊತ್ತಾ: ಭಾರತ ಕ್ರಿಕೆಟ್ ಕಂಡ ಅತ್ಯಪೂರ್ವ ಆಟಗಾರರಾದ ಸಚಿನ್, ದ್ರಾವಿಡ್, ಸೆಹ್ವಾಗ್ ಮತ್ತು ಲಕ್ಷ್ಮಣ್ ನಂತರ ವಿರಾಟ್ ಕೊಹ್ಲಿಯೇ ಶ್ರೇಷ್ಠ. ಕೊಹ್ಲಿ ಕೂಡಾ ಇವರದೇ ಸಾಲಿಗೆ ಸೇರುತ್ತಾರೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಹೊಗಳಿದ್ದಾರೆ.
‘ಟೆಸ್ಟ್ ಸರಣಿ ಸೋತ ಮೇಲೆ ವಿರಾಟ್ ಕೊಹ್ಲಿ ಮತ್ತು ಬಳಗ ತೋರಿಸಿದ ಅಪ್ರತಿಮ ಸಾಹಸವೇ ಅವರ ಪ್ರತಿಭೆ ಎಂತಹದ್ದು ಎಂದು ತೋರಿಸುತ್ತದೆ. ಕೊಹ್ಲಿಯನ್ನು ಭಾರತದ ಸರ್ವಕಾಲಿಕ ಶ್ರೇಷ್ಠರ ಪಟ್ಟಿಗೆ ಸೇರಿಸಬಹುದು’ ಎಂದು ಖಾಸಗಿ ಮಾಧ್ಯಮವೊಂದರಲ್ಲಿ ಕೊಹ್ಲಿ ಬರೆದುಕೊಂಡಿದ್ದಾರೆ.
‘ಸಚಿನ್, ಸೆಹ್ವಾಗ್, ದ್ರಾವಿಡ್, ರಿಕಿ ಪಾಂಟಿಂಗ್ ಮುಂತಾದ ದಿಗ್ಗಜರ ಕಾಲದಲ್ಲಿ ಆಡಿದ ಹೆಮ್ಮೆ ನನ್ನದು. ಇದೀಗ ಕೊಹ್ಲಿಯ ಗೆಲುವಿನ ಹಸಿರು, ರನ್ ದಾಹ ನೋಡಿದರೆ ಅವರದೇ ನೆನಪು ಬರುತ್ತದೆ’ ಎಂದು ಗಂಗೂಲಿ ಕೊಂಡಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ