Publish Date: Thu, 08 Feb 2018 (11:14 IST)
Updated Date: Thu, 08 Feb 2018 (11:17 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಧೋನಿ ಬ್ಯಾಟ್ ಮೂಲಕ ಕಮಾಲ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ಆಫ್ರಿಕಾ ನಾಯಕ ಆಡಂ ಮಾರ್ಕರಮ್ ಅವರನ್ನು ಸ್ಟಂಪ್ ಔಟ್ ಮಾಡಿದ ಧೋನಿ 400 ಬಾರಿ ಔಟ್ ಮಾಡಿದ ಮೊದಲ ಭಾರತೀಯ ವಿಕೆಟ್ ಕೀಪರ್ ಮತ್ತು ವಿಶ್ವದ ನಾಲ್ಕನೇ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾದರು.
ಇದರಲ್ಲಿ 294 ಕ್ಯಾಚ್ ಔಟ್ ಗಳು ಮತ್ತು 106 ಸ್ಟಂಪ್ ಔಟ್ ಸೇರಿದೆ. ಇದು ಧೋನಿ ವೃತ್ತಿ ಜೀವನದ 315 ನೇ ಪಂದ್ಯವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ