Publish Date: Thu, 08 Feb 2018 (09:14 IST)
Updated Date: Thu, 08 Feb 2018 (09:18 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಮನೀಶ್ ಪಾಂಡೆ ಆಡುವ ಬಳಗದಲ್ಲಿರಲಿಲ್ಲ. ಹಾಗಿದ್ದರೂ ಎದುರಾಳಿಗಳ ವಿಕೆಟ್ ಕೀಳಲು ನೆರವಾಗಿದ್ದಾರೆ. ಅದು ಹೇಗೆ ಅಂತೀರಾ?!
ಟೀಂ ಇಂಡಿಯಾ ಫೀಲ್ಡಿಂಗ್ ಮಾಡುತ್ತಿದ್ದಾಗ ಮನೀಶ್ ಪಾಂಡೆ ಕೆಲ ಕಾಲ ಕೇದಾರ್ ಜಾದವ್ ಬದಲಿಗೆ ಬದಲಿ ಕ್ಷೇತ್ರ ರಕ್ಷಕರಾಗಿ ಮೈದಾನದಲ್ಲಿದ್ದರು. ಈ ಸಂದರ್ಭದಲ್ಲಿ ದ.ಆಫ್ರಿಕಾ ಬ್ಯಾಟ್ಸ್ ಮನ್ ಖಯಾ ಝೋಂಡಾ ಹೊಡೆದ ಬಾಲ್ ನೇರವಾಗಿ ಕವರ್ ಕ್ಷೇತ್ರದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಪಾಂಡೆ ಕೈ ಸೇರಿತು.
ಇದರೊಂದಿಗೆ ಆಡದೇ ಇದ್ದ ಪಂದ್ಯದಲ್ಲಿ ಕ್ಯಾಚ್ ಪಡೆದ ಗರಿಮೆ ಮನೀಶ್ ಪಾಲಾಯಿತು. ಕಳೆದ ಮೂರೂ ಪಂದ್ಯಗಳಲ್ಲೂ ಮನೀಶ್ ಪಾಂಡೆ ಆಡಿಲ್ಲ. ಅವರ ಬದಲಿಗೆ ಆಲ್ ರೌಂಡರ್ ಕೇದಾರ್ ಜಾದವ್ ಅವಕಾಶ ಪಡೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ