Publish Date: Wed, 07 Feb 2018 (08:18 IST)
Updated Date: Wed, 07 Feb 2018 (08:22 IST)
ಕೇಪ್ ಟೌನ್: ಟೆಸ್ಟ್ ನಲ್ಲಿ ಕಳೆದ ಮಾನ ಈಗಾಗಲೇ ಟೀಂ ಇಂಡಿಯಾ ಏಕದಿನದಲ್ಲಿ ಮರಳಿ ಪಡೆಯಲು ಯಶಸ್ವಿಯಾಗಿದೆ. ಆದರೆ ಇನ್ನೂ ಅರ್ಧ ಕೆಲಸವೂ ಮುಗಿದಿಲ್ಲ. ಅದೆಲ್ಲವನ್ನೂ ಟೀಂ ಇಂಡಿಯಾ ಮಾಡುತ್ತದೆಯೇ?
ಈಗಾಗಲೇ ಸರಣಿಯ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಭಾರತ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಆಫ್ರಿಕನ್ನರ ಸ್ಪಿನ್ ಹುಳುಕು ಭಾರತಕ್ಕೆ ವರದಾನವಾಗಿದೆ. ಸ್ಪಿನ್ ಗೆ ಕೊಂಚ ನೆರವೂ ಸಿಕ್ಕರೂ ಭಾರತವನ್ನು ಹಿಡಿಯುವವರು ಯಾರೂ ಇಲ್ಲ.
ಇಂದು ಕೇಪ್ ಟೌನ್ ನಲ್ಲಿ ಮೂರನೇ ಏಕದಿನ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಆರಂಭಿಕರೂ ಯಶಸ್ವಿಯಾಗಿರುವುದರಿಂದ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಬೆಂಚ್ ಕಾಯಿಸಬೇಕಾದೀತು.
ಅತ್ತ ದ.ಆಫ್ರಿಕಾಗೆ ಭಾರತೀಯ ಸ್ಪಿನ್ನರ್ ಗಳನ್ನು ಎದುರಿಸುವುದರ ಜತೆಗೆ ಗಾಯಾಳುಗಳ ಚಿಂತೆ ಕಾಡುತ್ತಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದೇ ನಾಯಕನಿಗೆ ತಲೆನೋವಾಗಿದೆ. ಹೀಗಿರುವಾಗ ಈ ಪಂದ್ಯವೂ ಪೈಪೋಟಿಯಿಲ್ಲದೇ ನೀರಸವಾಗುತ್ತಾ? ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ