Select Your Language

Notifications

webdunia
webdunia
webdunia
webdunia

‘ಡ್ರೆಸ್ಸಿಂಗ್ ರೂಂನಲ್ಲಿ ಯಾವಾಗಲೂ ಉರಿಯುವ ಕೊಹ್ಲಿಗೆ ಕೂಲರ್ ಕೋಚ್ ಬೇಕು’

ವಿರಾಟ್ ಕೊಹ್ಲಿ
ಬೆಂಗಳೂರು: ಸ್ವಭಾವತಃ ಆಕ್ರಮಣಕಾರಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಶಾಂತಗೊಳಿಸಲು ಡ್ರೆಸ್ಸಿಂಗ್ ರೂಂನಲ್ಲಿ ಕೂಲ್ ಮೆಂಟರ್ ಬೇಕು ಎಂದು ಆರ್ ಸಿಬಿ ಕೋಚ್ ಆಗಿದ್ದ ದ.ಆಫ್ರಿಕಾದ ರೇ ಜೆನ್ನಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.
 

ಧೋನಿ ನಾಯಕತ್ವದಿಂದ ಕೊಹ್ಲಿ ನಾಯಕತ್ವಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಧೋನಿ ಶಾಂತ ಸ್ವಭಾವದವರು. ಆದರೆ ಕೊಹ್ಲಿ ಉರಿಯುವ ಸೂರ್ಯನಂತೆ. ಅವರನ್ನು ಶಾಂತವಾಗಿರಿಸಲು ಒಬ್ಬರ ಸಹಾಯ ಬೇಕು. ಇದು ಸಾಧ್ಯವಾದರೆ ಮಾತ್ರ ಅವರು ಪರಿಪೂರ್ಣ ನಾಯಕನಾಗಲು ಸಾಧ್ಯ ಎಂದಿದ್ದಾರೆ.

ಕೊಹ್ಲಿ ಮತ್ತು ರೇ ಜೆನ್ನಿಂಗ್ಸ್ ರಾಯಲ್ ಚಾಲೆಂಜರ್ ಬೆಂಗಳೂರು ತಂಡದಲ್ಲಿ ಜತೆಯಾಗಿ ಕೆಲಸ ಮಾಡಿದವರು. ಹಾಗಾಗಿ ಕೊಹ್ಲಿ ಸ್ವಭಾವದ ಬಗ್ಗೆ ಅವರು ಚೆನ್ನಾಗಿಯೇ ಅರ್ಥಮಾಡಿಕೊಂಡು ಮಾತನಾಡಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯ ಕ್ರಿಕೆಟ್ ಗೆ ಇನ್ನು ಬೆಂಗಳೂರು ರಿಮೋಟ್ ಕಂಟ್ರೋಲ್?!