Select Your Language

Notifications

webdunia
webdunia
webdunia
webdunia

ಭಾರತೀಯ ಕ್ರಿಕೆಟ್ ಗೆ ಇನ್ನು ಬೆಂಗಳೂರು ರಿಮೋಟ್ ಕಂಟ್ರೋಲ್?!

ಬಿಸಿಸಿಐ
ಬೆಂಗಳೂರು: ಪ್ರತೀ ವರ್ಷ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುವುದು, ಎನ್ ಸಿಎ ಘಟಕವಿರುವುದು ಸೇರಿದಂತೆ ಹೆಚ್ಚಿನ ಕ್ರಿಕೆಟ್ ಚಟುವಟಿಕೆಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ಇನ್ನು ಕ್ರಿಕೆಟ್ ದೊರೆಯ ಕೇಂದ್ರ ಕಚೇರಿಯೇ ಬೆಂಗಳೂರಿಗೆ ಶಿಫ್ಟ್ ಆಗಲಿದೆಯೇ?
 

ಅಂತಹದ್ದೊಂದು ಯೋಜನೆ ಬಿಸಿಸಿಐಗಿದೆ. ಮೊದಲು ಕೋಲ್ಕೊತ್ತಾದಲ್ಲಿ ಬಿಸಿಸಿಐ ಕಚೇರಿಯಿತ್ತು. ಬಳಿಕ ಅದನ್ನು ಮುಂಬೈಗೆ ಸ್ಥಳಾಂತರಿಸಲಾಯಿತು. ಇದೀಗ ಬೆಂಗಳೂರಿಗೆ ಬಿಸಿಸಿಐ ಕಚೇರಿಗೆ ಶಿಫ್ಟ್ ಆಗುವ ಲಕ್ಷಣ ಕಾಣುತ್ತಿದೆ.

ಮುಂಬೈನಲ್ಲಿ ಈಗ ಇರುವ ಕಚೇರಿ ಸಣ್ಣದು. ಅದರ ಬದಲಿಗೆ ಬೆಂಗಳೂರಿಗೆ ಶಿಫ್ಟ್ ಆದರೆ ಅಲ್ಲಿ ಬಿಸಿಸಿಐಗೆ ಸೇರಿದ 40 ಎಕರೆ ಜಾಗವಿದೆ. ಅಲ್ಲಿಯೇ ಕಚೇರಿ ಸ್ಥಾಪಿಸಬಾರದೇಕೆ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ ಮಂಡಳಿಯ ಸದಸ್ಯರಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಲ್ಲಾ ಸರಿ ಹೋದರೆ ಮುಂದಿನ ವರ್ಷಕ್ಕೆ ಬಿಸಿಸಿಐ ಕಚೇರಿ ಬೆಂಗಳೂರಿಗೆ ಶಿಫ್ಟ್ ಆಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾ ಕ್ರಿಕೆಟಿಗರಿಗೆ ಭಾರತೀಯ ಮಹಿಳೆಯರ ಚಳ್ಳೆ ಹಣ್ಣು!