Publish Date: Tue, 06 Feb 2018 (09:04 IST)
Updated Date: Tue, 06 Feb 2018 (09:07 IST)
ಕಿಂಬರ್ಲಿ: ಒಂದೆಡೆ ಭಾರತ ಪುರುಷರ ಕ್ರಿಕೆಟ್ ತಂಡ ದ.ಆಫ್ರಿಕಾವನ್ನು ಅದರದ್ದೇ ನೆಲದಲ್ಲಿ ಸದೆಬಡಿಯುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರೂ ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತು ಪಡಿಸಿದ್ದಾರೆ.
ನಿನ್ನೆ ನಡೆದ ಮಹಿಳೆಯರ ಏಕದಿನ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಆಫ್ರಿಕಾ ಮಹಿಳಾ ತಂಡವನ್ನು 88 ರನ್ ಗಳಿಂದ ಭರ್ಜರಿಯಾಗಿ ಸೋಲಿಸದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಮೃತಿ ಮಂದನ (84) ಮತ್ತು ಮಿಥಾಲಿ ರಾಜ್ (45) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಅತಿಥೇಯ ತಂಡ 43.2 ಓವರ್ ಗಳಲ್ಲಿ 125 ರನ್ ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಹಿರಿಯ ವೇಗಿ ಜೂಲಾನ್ ಗೋಸ್ವಾಮಿ 4 ವಿಕೆಟ್ ಕಿತ್ತರು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಭಾರತ1-0 ಅಂತರದಿಂದ ಮುನ್ನಡೆ ಸಾಧಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ