ರಾಹುಲ್ ದ್ರಾವಿಡ್ ಬಗ್ಗೆ ಪೃಥ್ವಿ ಶಾ ಹೇಳಿದ್ದೇನು?

ಮಂಗಳವಾರ, 6 ಫೆಬ್ರವರಿ 2018 (08:29 IST)
ಬೆಂಗಳೂರು: ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಶಾ ತಮ್ಮ ಯಶಸ್ಸಿಗೆ ಕಾರಣರಾದವರಿಗೆಲ್ಲಾ ಕೃತಜ್ಞತೆ ಸಲ್ಲಿಸಿದ್ದಾರೆ. ಅವರಲ್ಲಿ ಮೊದಲನೆಯವರಿಗಾಗಿ ರಾಹುಲ್ ದ್ರಾವಿಡ್ ಹೆಸರು ಹೇಳಿದ್ದಾರೆ.
 

‘ನಮಗೆ ಆರಂಭದಿಂದಲೂ ಬೆಂಬಲ ಕೋರಿದ ಎಲ್ಲರಿಗೂ ಧನ್ಯವಾದಗಳು. ಇಂತಹ ತಂಡದ ನಾಯಕನಾಗಿರುವುದು ನನಗೆ ನಿಜಕ್ಕೂ ಗೌರವ. ಈ ತಂಡ ನನಗೆ ಕುಟುಂಬಕ್ಕಿಂತಲೂ ಹೆಚ್ಚು.  ಇವರೆಲ್ಲರ ಸಹಕಾರವಿಲ್ಲದೇ ಹೋದಲ್ಲಿ ಸಾಧ್ಯವಾಗುತ್ತಿಲ್ಲ’ ಶಾ ಹೇಳಿದ್ದಾರೆ.

ಅವರೆಲ್ಲರಗಿಂತ ಹೆಚ್ಚು ಶಾ ತಮ್ಮ ವಿಶೇಷ ಗೌರವವನ್ನು ರಾಹುಲ್ ದ್ರಾವಿಡ್ ಗೆ ಅರ್ಪಿಸಿದ್ದಾರೆ. ‘ರಾಹುಲ್ ಸರ್ ಅವರನ್ನು ಕೋಚ್ ಆಗಿ ಪಡೆದಿರುವುದು ಅದ್ಭುತ. ನನ್ನ ಮತ್ತು ತಂಡದ ಸದಸ್ಯರಿಗೆ ಅವರಿಂದ ಬರುವ ಪ್ರತೀ ಮಾತಿನಿಂದ ನಾವು ವ್ಯಕ್ತಿಯಾಗಿ ಆಟಗಾರನಾಗಿ ರೂಪುಗೊಂಡಿದ್ದೇವೆ. ಅವರೊಬ್ಬ ಲೆಜೆಂಡ್. ನಮ್ಮ ಯಶಸ್ಸಿಗೆ ಸದಾ ಪರಿಶ್ರಮಪಟ್ಟ ಸಹಾಯಕ ಸಿಬ್ಬಂದಿಗಳನ್ನು ಹೇಗೆ ಮರೆಯಲು ಸಾಧ್ಯ?’ ಎಂದು ಶಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶ್ರೀಶಾಂತ್ ಮೇಲೆ ಅಜೀವ ನಿಷೇಧ ವಿಧಿಸಿರುವ ಹಿನ್ನೆಲೆ; ಸುಪ್ರೀಂನಿಂದ ಬಿಸಿಸಿಐಗೆ ನೋಟಿಸ್