Publish Date: Sat, 03 Feb 2018 (13:32 IST)
Updated Date: Sat, 03 Feb 2018 (13:36 IST)
ಬೇ ಓವಲ್: ಅಂಡರ್ ವಿಶ್ವಕಪ್ ಗೆಲ್ಲುವ ಕೋಟ್ಯಂತರ ಭಾರತೀಯರ ಕನಸು ಕೊನೆಗೂ ನನಸಾಗಿದೆ. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ಹುಡುಗರು ಗುರುವಿಗೆ ತಕ್ಕ ಉಡುಗೊರೆ ಕೊಟ್ಟಿದ್ದಾರೆ.
ಫೈನಲ್ ನಲ್ಲಿ ಆಸ್ಟ್ರೇಲಿಯವಾನ್ನು 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ಭಾರತ ನಾಲ್ಕನೆಯ ಬಾರಿಗೆ ವಿಶ್ವಕಪ್ ಗೆದ್ದು ವಿಶ್ವ ದಾಖಲೆ ಮಾಡಿತು. ಪೆವಿಲಿಯನ್ ಕೂತು ಆಟ ನೋಡುತ್ತಿದ್ದ ದ್ರಾವಿಡ್ ಮೊಗದಲ್ಲಿ ಎಂದಿನ ಶಾಂತತೆಯ ಜತೆಗೆ ಕಿರು ನಗುವೂ ಮೂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ನಿಗದಿತ 50 ಓವರ್ ಗಳಲ್ಲಿ 216 ಗಳಿಸಿ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ಪೃಥ್ವಿ ಶಾ(29) ಮತ್ತು ಶುಭಮ್ ಗಿಲ್ (31) ಉತ್ತಮ ಆರಂಭ ದೊರಕಿಸಿಕೊಟ್ಟರು. ನಂತರ ಬಂದ ಮನ್ ಜೋತ್ 101 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ 38.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಗುರಿ ಮುಟ್ಟಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ