Publish Date: Sat, 03 Feb 2018 (10:07 IST)
Updated Date: Sat, 03 Feb 2018 (10:10 IST)
ಬೇ ಓವಲ್: ಅಂಡರ್ 19 ವಿಶ್ವಕಪ್ ಫೈನಲ್ ಗೇರಿರುವ ತನ್ನ ಹುಡುಗರಿಗೆ ಕೋಚ್ ರಾಹುಲ್ ದ್ರಾವಿಡ್ ಖಡಕ್ ಸೂಚನೆಯೊಂದನ್ನು ಕೊಟ್ಟಿದ್ದಾರಂತೆ. ಅದನ್ನು ಹುಡುಗರೂ ಚಾಚೂ ತಪ್ಪದೆ ಪಾಲಿಸಿದ್ದಾರೆ!
ಅದೇನದು ಅಂತೀರಾ? ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದೇ ಕಾಲ ಕಳೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹದ್ದಾರಲ್ಲಿ ದ್ರಾವಿಡ್ ತಮ್ಮ ಹುಡುಗರಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ. ಫೈನಲ್ ತನಕ ಸ್ವಿಚ್ ಆಫ್ ಮಾಡಿ ಎಂದಿದ್ದರಂತೆ! ಅದರಂತೆ ಮನೆಯವರ ಜತೆ ಮಾತೂ ಆಡದೇ ಕ್ರಿಕೆಟಿಗರು ಗುರು ದ್ರಾವಿಡ್ ಮಾತನ್ನು ಪಾಲಿಸುತ್ತಿದ್ದಾರಂತೆ.
ಇತ್ತೀಚೆಗೆ ನಡೆದ ಐಪಿಎಲ್ ಹರಾಜು ಮುಂತಾದ ವಿಷಯಗಳ ಬಗ್ಗೆ ಆಟಗಾರರ ಗಮನ ಹಾಳಾಗದಂತೆ ದ್ರಾವಿಡ್ ನೋಡಿಕೊಂಡಿದ್ದಾರಂತೆ. ಅಷ್ಟೇ ಅಲ್ಲದೆ, ಐಪಿಎಲ್ ಹರಾಜು ಪ್ರತಿ ವರ್ಷ ನಡೆಯುತ್ತದೆ. ಆದರೆ ವಿಶ್ವಕಪ್ ಗೆಲ್ಲುವ ಅವಕಾಶ ಯಾವತ್ತೂ ಬರಲ್ಲ ಎಂದು ಆಟಗಾರರ ಗಮನ ಬೇರೆ ಕಡೆ ಹರಿಯದಂತೆ ನೋಡಿಕೊಂಡಿದ್ದಾರಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ