Publish Date: Tue, 30 Jan 2018 (09:47 IST)
Updated Date: Tue, 30 Jan 2018 (09:48 IST)
ನವದೆಹಲಿ: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿ ಫೈನಲ್ಸ್ ಗೆ ಲಗ್ಗೆಯಿಟ್ಟಿದೆ. ಈ ಪ್ರತಿಭಾವಂತರ ತಂಡದ ಕೋಚ್ ವಾಲ್ ರಾಹುಲ್ ದ್ರಾವಿಡ್ ಎನ್ನುವುದು ನಮಗೆ ಹೆಮ್ಮೆಯ ಸಂಗತಿ.
ಸೆಮಿಫೈನಲ್ ಹಣಾಹಣಿಯಲ್ಲಿ ಪೃಥ್ವಿ ಶಾ ನೇತೃತ್ವದ ಭಾರತ ಯುವ ತಂಡ 203 ರನ್ ಗಳ ಭಾರೀ ಅಂತರದಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತ್ತು. ಭಾರತದ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ಶುಭಮ್ ಗಿಲ್ 102 ರನ್ ಸಿಡಿಸಿದ್ದರು.
ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕ್ ಹುಡುಗರು ಇಶಾನ್ ಪರೆಲ್ (4 ವಿಕೆಟ್) ದಾಳಿಗೆ ತತ್ತರಿಸಿ ಕೇವಲ 69 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಭಾರತ ದಾಖಲೆಯ 6 ನೇ ಬಾರಿ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿತು. ಫೆ. 3 ರಂದು ಫೈನಲ್ ನಡೆಯಲಿದ್ದು, ದ್ರಾವಿಡ್ ಹುಡುಗರು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ