Publish Date: Wed, 31 Jan 2018 (08:21 IST)
Updated Date: Wed, 31 Jan 2018 (08:26 IST)
ನವದೆಹಲಿ: ಅವರ ಬಳಿ ರಾಹುಲ್ ದ್ರಾವಿಡ್ ಇದ್ದರು. ನಮಗೆ ಮಾರ್ಗದರ್ಶನ ತೋರಲು ಯಾರೂ ಇರಲಿಲ್ಲ. ದ್ರಾವಿಡ್ ರಂತಹವರು ನಮ್ಮಲ್ಲೂ ಇದ್ದಿದ್ದರೆ ಕತೆಯೇ ಬೇರೆಯಾಗುತ್ತಿತ್ತು!
ಹೀಗಂತ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತ ಬಳಿಕ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.
ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ತೋರುತ್ತಿದೆ. ಭಾರತ ಅಂಡರ್ 19 ತಂಡದ ಯಶಸ್ಸಿಗೆ ದ್ರಾವಿಡ್ ಮಾರ್ಗದರ್ಶನವೇ ಪ್ರಮುಖ ಕಾರಣ. ಇದಕ್ಕಾಗಿ ವಾಲ್ ದ್ರಾವಿಡ್ ರನ್ನು ಕೊಂಡಾಡಲಾಗುತ್ತಿದೆ.
ಇದೀಗ ಪಾಕ್ ಅಭಿಮಾನಿಗಳೂ ದ್ರಾವಿಡ್ ಗುಣಗಾನ ಮಾಡುತ್ತಿದ್ದಾರೆ. ದ್ರಾವಿಡ್ ರಂತೆ ತಮ್ಮ ದೇಶದ ಹಿರಿಯ ಕ್ರಿಕೆಟಿಗ ಯೂನಿಸ್ ಖಾನ್ ಪಾಕ್ ಎ ತಂಡದ ಕೋಚ್ ಆಗಲಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಅಂತೂ ನಿವೃತ್ತಿಯಾದ ಮೇಲೂ ಪಾಕ್ ಗೆ ಸಿಂಹ ಸ್ವಪ್ನರಾಗಿದ್ದಾರೆ ದ್ರಾವಿಡ್ !
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ