Publish Date: Thu, 11 Jan 2018 (09:39 IST)
Updated Date: Thu, 11 Jan 2018 (09:41 IST)
ಬೆಂಗಳೂರು: ಅಪ್ಪನಿಗೆ ತಕ್ಕ ಮಗ ಎನ್ನುವುದನ್ನು ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ನಿರೂಪಿಸಿದ್ದಾರೆ. ನಿನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ದ್ರಾವಿಡ್ ಗೆ ಪುತ್ರನಿಂದ ಪರ್ಫೆಕ್ಟ್ ಗಿಫ್ಟ್ ಸಿಕ್ಕಿದೆ.
ಕೆಎಸ್ ಸಿಎ ಅಂಡರ್ 14 ಟೂರ್ನಮೆಂಟ್ ನಲ್ಲಿ ಮಲ್ಯ ಅದಿತಿ ಇಂಟರ್ನ್ಯಾಷನಲ್ ಸ್ಕೂಲ್ ಪರ ಆಡಿದ ದ್ರಾವಿಡ್ ಪುತ್ರ ಸಮಿತ್ 150 ರನ್ ಚಚ್ಚಿದ್ದಾರೆ. ಅಲ್ಲದೆ, ತಮ್ಮ ತಂಡಕ್ಕೆ 419 ರನ್ ಗಳ ಬೃಹತ್ ಗೆಲುವು ಕೊಡಿಸಿದ್ದಾರೆ. ವಿಶೇಷವೆಂದರೆ ದ್ರಾವಿಡ್ ಜತೆಗೆ ಸುನಿಲ್ ಜೋಶಿ ಪುತ್ರ ಕೂಡಾ 150 ಪ್ಲಸ್ ರನ್ ಹೊಡೆದಿದ್ದಾರೆ.
ಹಿಂದೆ ಸುನಿಲ್ ಜೋಶಿ ಮತ್ತು ರಾಹುಲ್ ದ್ರಾವಿಡ್ ಹಲವು ಬಾರಿ ಕರ್ನಾಟಕದ ಪರ ಜತೆಯಾಟವಾಡಿದ್ದರು. ಇದೀಗ ಇವರಿಬ್ಬರ ಪುತ್ರರು ಭರ್ಜರಿ ಜತೆಯಾಟವಾಡಿದ್ದು ವಿಶೇಷವಾಗಿತ್ತು. ಅಪ್ಪ ದ್ರಾವಿಡ್ ಗೆ ಇದಕ್ಕಿಂತ ದೊಡ್ಡ ಗಿಫ್ಟ್ ಬೇಕೇ?!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ