Publish Date: Thu, 11 Jan 2018 (08:22 IST)
Updated Date: Thu, 11 Jan 2018 (08:24 IST)
ಸೆಂಚೂರಿಯನ್: ಭಾರತ-ದ.ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಈಗಲೂ ಟೀಂ ಇಂಡಿಯಾ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿರುವ ಕ್ರಿಕೆಟಿಗರು ಮತ್ತು ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆಯುವಂತೆ ದ.ಆಫ್ರಿಕಾದ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಕ್ಲೂಸ್ನರ್ ಹೇಳಿದ್ದಾರೆ.
ಈ ಸರಣಿಯನ್ನು ಭಾರತ ಗೆಲ್ಲುವ ಯಾವುದೇ ಲಕ್ಷಣ ನನಗೆ ಕಾಣಿಸುತ್ತಿಲ್ಲ ಎಂದು ಸದ್ಯಕ್ಕೆ ಜಿಂಬಾಬ್ವೆ ತಂಡದ ಕೋಚ್ ಕೂಡಾ ಆಗಿರುವ ದ.ಆಫ್ರಿಕಾದ ಮಾಜಿ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.
‘ಪ್ರಮುಖ ವೇಗಿಗಳ ಪಡೆಯನ್ನೇ ದ.ಆಫ್ರಿಕಾ ಹೊಂದಿದೆ. ಭಾರತ ಇವರ ವಿರುದ್ಧ ಗೆಲ್ಲಬೇಕೆಂದರೆ ದೊಡ್ಡ ಸ್ಕೋರ್ ಕಲೆ ಹಾಕಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅದು ಕಷ್ಟವೆಂದು ನನಗೆ ಅನಿಸುತ್ತಿದೆ. ಮುಂದಿನ ಎರಡು ಪಂದ್ಯಗಳ ಪೈಕಿ ಭಾರತ ಅಬ್ಬಬ್ಬಾ ಎಂದರೆ ಒಂದು ಗೆಲುವು ಅಥವಾ ಡ್ರಾ ಸಾಧಿಸಬಹುದೇನೋ’ ಎಂದು ಲ್ಯಾನ್ಸ್ ಕ್ಲೂಸ್ನರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ