Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ಸರಣಿಗೆ ತಯಾರಾಗಲು ಬಿಸಿಸಿಐ ಮಾಡಿದ್ದ ಯೋಜನೆಯನ್ನು ತಿರಸ್ಕರಿಸಿದ್ದ ವಿರಾಟ್ ಪಡೆ!

ದ.ಆಫ್ರಿಕಾ ಸರಣಿಗೆ ತಯಾರಾಗಲು ಬಿಸಿಸಿಐ ಮಾಡಿದ್ದ ಯೋಜನೆಯನ್ನು ತಿರಸ್ಕರಿಸಿದ್ದ ವಿರಾಟ್ ಪಡೆ!
ಮುಂಬೈ , ಗುರುವಾರ, 11 ಜನವರಿ 2018 (09:01 IST)
ಮುಂಬೈ: ದ.ಆಫ್ರಿಕಾದಲ್ಲಿರುವ ಟೀಂ ಇಂಡಿಯಾ ಈಗ ಅಭ್ಯಾಸಕ್ಕೆ ಸಮಯ  ಸಿಕ್ಕಿರಲಿಲ್ಲ, ವ್ಯವಸ್ಥೆಯಿಲ್ಲ ಎಂದೆಲ್ಲಾ ಸೋಲಿಗೆ ನೆಪ ಹುಡುಕುತ್ತಿದ್ದರೆ, ಬಿಸಿಸಿಐ ಸರಣಿ ಆರಂಭಕ್ಕೆ ಮೊದಲು ತಯಾರಾಗಲು ನೀಡಿದ್ದ ಪ್ರಸ್ತಾಪವೊಂದನ್ನು ತಿರಸ್ಕರಿಸುವುದು ಬೆಳಕಿಗೆ ಬಂದಿದೆ.
 

ದ.ಆಫ್ರಿಕಾ ಸರಣಿಗೆ ಮೊದಲು ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಗಳ ಪಂದ್ಯವಾಡುತ್ತಿತ್ತು. ಆಫ್ರಿಕಾ ಸರಣಿಗೆ ಆಯ್ಕೆಯಾದ ಹೆಚ್ಚಿನ ಕ್ರಿಕೆಟಿಗರು ಲಂಕಾ ಸರಣಿಯಲ್ಲಿ ಇರಲಿಲ್ಲ. ಈ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ಮೊದಲೇ ದ. ಆಫ್ರಿಕಾಗೆ ಕಳುಹಿಸಿ ಸರಣಿಗೆ ತಯಾರಾಗಲು ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿತ್ತು.

ಈ ಆಟಗಾರರು ಮೊದಲೇ ಆಫ್ರಿಕಾಗೆ ತೆರಳಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಿ ಎನ್ನುವುದು ಬಿಸಿಸಿಐ  ಉದ್ದೇಶವಾಗಿತ್ತು. ಇದಕ್ಕಾಗಿ ಆಟಗಾರರ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸಲು ಬಿಸಿಸಿಐ ತಯಾರಿತ್ತು. ಆದರೆ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಇದನ್ನು ತಿರಸ್ಕರಿಸಿತು ಎಂಬ ವಿಷಯವನ್ನು ಬಿಸಿಸಿಐ ಮೂಲಗಳು ಆಂಗ್ಲ ಮಾಧ್ಯಮಕ್ಕೆ ಬಹಿರಂಗಪಡಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗಾಯದ ಮೇಲೆ ಬರೆ ಎಳೆದ ದ.ಆಫ್ರಿಕಾ ಕ್ರಿಕೆಟಿಗ!