Publish Date: Wed, 10 Jan 2018 (10:06 IST)
Updated Date: Wed, 10 Jan 2018 (10:08 IST)
ಸೆಂಚೂರಿಯನ್: ಮೊದಲ ಟೆಸ್ಟ್ ನಲ್ಲಿ ಸೋತ ಮೇಲೆ ಟೀಂ ಇಂಡಿಯಾ ಆಟಗಾರರ ಆಯ್ಕೆ ವಿಚಾರದಲ್ಲಿ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆ ಎದುರಿಸುತ್ತಿದ್ದಾರೆ.
ಅಜಿಂಕ್ಯಾ ರೆಹಾನೆ ಮತ್ತು ಕೆಎಲ್ ರಾಹುಲ್ ರನ್ನು ಅವಗಣಿಸಿದ ಕೊಹ್ಲಿ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ರೆಹಾನೆಯನ್ನು ಕಡೆಗಣಿಸಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದಕ್ಕೆ ಪ್ರಸಕ್ತ ಫಾರ್ಮ್ ಗಣನೆಗೆ ತೆಗೆದುಕೊಂಡಿದ್ದಾಗಿ ಕೊಹ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದರು.
ಇದೀಗ ಕೆಎಲ್ ರಾಹುಲ್ ರನ್ನು ಹೊರಗಿಟ್ಟಿದ್ದೇಕೆ ಎಂದೂ ಕೊಹ್ಲಿ ಸಮರ್ಥನೆ ಕೊಟ್ಟಿದ್ದಾರೆ. ನಮಗೆ ಆರಂಭಿಕರಾಗಿ ಒಬ್ಬ ಎಡಗೈ ಮತ್ತು ಒಬ್ಬ ಬಲಗೈ ಬ್ಯಾಟ್ಸ್ ಮನ್ ಅಗತ್ಯವಿತ್ತು. ಧವನ್ ಎಡಗೈ ಆಟಗಾರ ಎಂದು ರಾಹುಲ್ ಬದಲು ಅವರನ್ನೇ ಆಯ್ಕೆ ಮಾಡಿದೆವು ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ