Select Your Language

Notifications

webdunia
webdunia
webdunia
webdunia

ಶಿಖರ್ ಧವನ್ ಕಿತ್ತು, ಕೆಎಲ್ ರಾಹುಲ್ ಆಡಿಸಿ ಎಂದ ಟೀಂ ಇಂಡಿಯಾ ಕ್ರಿಕೆಟಿಗ!

ಶಿಖರ್ ಧವನ್ ಕಿತ್ತು, ಕೆಎಲ್ ರಾಹುಲ್ ಆಡಿಸಿ ಎಂದ ಟೀಂ ಇಂಡಿಯಾ ಕ್ರಿಕೆಟಿಗ!
ಮುಂಬೈ , ಬುಧವಾರ, 10 ಜನವರಿ 2018 (09:48 IST)
ಮುಂಬೈ: ಸಚಿನ್ ತೆಂಡುಲ್ಕರ್ ನಂತರ ಇದೀಗ ಕೆಎಲ್ ರಾಹುಲ್ ರನ್ನು ಆಡುವ ಬಳಗಕ್ಕೆ ಹಾಕಲು ಮತ್ತೊಬ್ಬ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.
 

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೌರವ್ ಗಂಗೂಲಿ, ರಾಹುಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ‘ಶಿಖರ್ ಧವನ್ ರನ್ನು ಹೊರಗಿರಿಸಿ ಕೆಎಲ್ ರಾಹುಲ್ ರನ್ನು ಆರಂಭಿಕ ಸ್ಥಾನಕ್ಕೆ ಕರೆತರಬೇಕು. ಯಾಕೆಂದರೆ ರಾಹುಲ್ ವಿದೇಶಗಳಲ್ಲಿ ಉತ್ತಮವಾಗಿ ಆಟವಾಡಿದ ದಾಖಲೆಯಿದೆ’ ಎಂದಿದ್ದಾರೆ.

ಸಚಿನ್ ತೆಂಡುಲ್ಕರ್ ಕೂಡಾ ಈ ಸರಣಿಗೆ ಮೊದಲು ರಾಹುಲ್ ಒಬ್ಬರೇ ಆಫ್ರಿಕಾ ದಾಳಿಯನ್ನು ಎದುರಿಸಲು ಸಮರ್ಥರು ಎಂದಿದ್ದರು. ಆದರೆ ಅವರನ್ನು ಮೊದಲ ಟೆಸ್ಟ್ ನಲ್ಲಿ ಹೊರಗಿಡಲಾಗಿತ್ತು. ಇನ್ನೊಂದೆಡೆ ರೋಹಿತ್ ಶರ್ಮಾ ಬದಲಿಗೆ ಅಜಿಂಕ್ಯಾ ರೆಹಾನೆಯನ್ನು ಆಡಿಸಬೇಕು ಎಂದೂ ಗಂಗೂಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಫ್ರಿಕಾ ಬೌಲರ್ ಗಳು ವಿರಾಟ್ ಕೊಹ್ಲಿ ಬಾಲ ಬಿಚ್ಚದಂತೆ ನೋಡಿಕೊಂಡಿದ್ದು ಹೇಗೆ ಗೊತ್ತಾ?