Publish Date: Wed, 31 Jan 2018 (08:12 IST)
Updated Date: Wed, 31 Jan 2018 (08:18 IST)
ಚೆನ್ನೈ: 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಬ ಐಪಿಎಲ್ ಟೀಂ ಹುಟ್ಟು ಹಾಕಿದಾಗ ಧೋನಿಗೆ ನಾಯಕತ್ವ ನೀಡುವ ಯಾವ ಇರಾದೆಯೂ ಮಾಲಿಕರಿಗಿರಲಿಲ್ಲವಂತೆ!
ಮೂರು ಬಾರಿ ಸಿಎಸ್ ಕೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ ಬದಲು ವೀರೇಂದ್ರ ಸೆಹ್ವಾಗ್ ರನ್ನು ಖರೀದಿಸಲು ಮಾಲಿಕ ಎನ್. ಶ್ರೀನಿವಾಸನ್ ಬಯಸಿದ್ದರಂತೆ. ಆದರೆ ಸಿಎಸ್ ಕೆ ತಂಡದ ಕ್ರಿಕೆಟ್ ನಿರ್ದೇಶಕ ಎನ್ ಚಂದ್ರಶೇಖರ್ ಧೋನಿಯನ್ನೇ ಆಯ್ಕೆ ಮಾಡುವಂತೆ ಹಠ ಹಿಡಿದರಂತೆ.
ಸೆಹ್ವಾಗ್ ಬದಲು ಧೋನಿ ಯಾಕೆ ಎಂದು ಶ್ರೀನಿವಾಸನ್ ಕೇಳಿದ್ದಕ್ಕೆ ಸೆಹ್ವಾಗ್ ರಲ್ಲಿ ಇಲ್ಲದ್ದು ಧೋನಿಯಲ್ಲಿ ಇದೆ ಎಂದು ಉತ್ತರಿಸಿದ್ದರಂತೆ. ಕೊನೆಗೂ ಒತ್ತಡಕ್ಕೆ ಮಣಿದು ಧೋನಿ ಚೆನ್ನೈ ತಂಡಕ್ಕೆ ಬಂದರು. ಉಳಿದದ್ದು ಇತಿಹಾಸ. ಧೋನಿ ಈಗ ಚೆನ್ನೈ ಅಭಿಮಾನಿಗಳ ಪಾಲಿಗೆ ತಲೈವಾ ಆಗಿಬಿಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ