Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಭಾಷಣದೊಳಗೆ ರಾಹುಲ್ ದ್ರಾವಿಡ್ ಬಂದಿದ್ದೇಕೆ?!

ಪ್ರಧಾನಿ ಮೋದಿ ಭಾಷಣದೊಳಗೆ ರಾಹುಲ್ ದ್ರಾವಿಡ್ ಬಂದಿದ್ದೇಕೆ?!
ಬೆಂಗಳೂರು , ಸೋಮವಾರ, 5 ಫೆಬ್ರವರಿ 2018 (08:28 IST)
ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮದಲ್ಲಿ ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ರಾಹುಲ್ ದ್ರಾವಿಡ್ ಹೆಸರೂ ಬಂದಿದೆ. ಇದಕ್ಕೆ ಕಾರಣವೇನು ಗೊತ್ತಾ?
 

ಅಷ್ಟಕ್ಕೂ ರಾಜಕೀಯ ಕಾರ್ಯಕ್ರಮದಲ್ಲಿ ದ್ರಾವಿಡ್ ಹೆಸರನ್ನು ಮೋದಿ ಉಲ್ಲೇಖಿಸಿದ್ದೇಕೆ? ಇದಕ್ಕೆ ಕಾರಣ ರಾಹುಲ್ ಕರ್ನಾಟಕದವರು ಎಂಬುದಾಗಿದೆ.

ಭಾಷಣದ ಆರಂಭದಲ್ಲೇ ಕರ್ನಾಟಕದ ಮಹಾನ್ ವ್ಯಕ್ತಿಗಳ ಹೆಸರು ಉಲ್ಲೇಖಿಸಿದ್ದ ಮೋದಿ, ನಂತರ ಕರ್ನಾಟಕದ ಜನರ ವ್ಯಕ್ತಿತ್ವದ ಬಗ್ಗೆ ಕೊಂಡಾಡುತ್ತಾ ರಾಹುಲ್ ದ್ರಾವಿಡ್ ಹೆಸರು ಪ್ರಸ್ತಾಪಿಸಿದರು. ಮೊನ್ನೆಯಷ್ಟೇ ನಮ್ಮ ಹುಡುಗರು ಅಂಡರ್ 19 ವಿಶ್ವಕಪ್ ಗೆದ್ದರು. ಈ ಯುವಕರನ್ನು ತಯಾರು ಮಾಡಿದ್ದು ಯಾರು? ಇದೇ ನೆಲದ ಹೆಮ್ಮೆಯ ಪುತ್ರ ರಾಹುಲ್ ದ್ರಾವಿಡ್ ಎಂದು ಮೋದಿ ಕೊಂಡಾಡಿದ್ದಾರೆ. ಇದಕ್ಕೆ ಭಾರೀ ಚಪ್ಪಾಳೆಯೂ ಬಂತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಮೇಲೆ ಬೇಸರಗೊಂಡ ವಾಟಾಳ್ ನಾಗರಾಜ್ ಹೀಗ್ಯಾಕೆ ಹೇಳಿದ್ರು....?