Publish Date: Sun, 04 Feb 2018 (12:48 IST)
Updated Date: Sun, 04 Feb 2018 (12:50 IST)
ಬೆಂಗಳೂರು: ಇಂದು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ ಖುದ್ದಾಗಿ ತೆರಳಿ ಸ್ವಾಗತ ಕೋರಲ್ಲ. ಹೀಗೆಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ಇದು ರಾಜಕೀಯ ಕಾರ್ಯಕ್ರಮವಾಗಿರುವುದದರಿಂದ ಸಿಎಂ ಖುದ್ದಾಗಿ ಸ್ವಾಗತ ಕೋರುತ್ತಿಲ್ಲ ಎಂಬ ಮಾಹಿತಿ ಬಂದಿದೆ. ಅವರ ಬದಲಿಗೆ ಸರ್ಕಾರದ ವತಿಯಿಂದ ಸಚಿವರೊಬ್ಬರು ತೆರಳಿ ಸ್ವಾಗತ ಕೋರುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ಬಾರಿ ಪ್ರಧಾನಿ ಮೋದಿ ಬೆಂಗಳೂರು, ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗಲೂ ಸಿಎಂ ಖುದ್ದಾಗಿ ತೆರಳಿ ಸ್ವಾಗತ ಕೋರಿರಲಿಲ್ಲ. ಆಗ ಅದು ರಾಜಕೀಯ ಭೇಟಿಯಾಗಿರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ