Publish Date: Fri, 02 Feb 2018 (08:44 IST)
Updated Date: Fri, 02 Feb 2018 (08:45 IST)
ಬೆಂಗಳೂರು: ಇತ್ತೀಚೆಗೆ ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ನಾಯಕರ ಮೇಲೆ ಹರಿಹಾಯುತ್ತಿರುವ ಬಹುಭಾಷಾ ತಾರೆ ಪ್ರಕಾಶ್ ರೈ ಮೇಲೆ ನಟ, ಬಿಜೆಪಿ ನಾಯಕ ಜಗ್ಗೇಶ್ ಚಾಟಿ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತಸಂತೋಷ್ ಕೊಲೆಯಾಗಿದೆ. ಇದರ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ಈ ಯುವಕನ ಕೊಲೆ ಬಗ್ಗೆ ಮಾತನಾಡಲು ನಿಮಗೆ ನಾಲಿಗೆ ಹೊರಳುತ್ತಿಲ್ಲವೇ ಎಂದು ಪ್ರಕಾಶ್ ರೈ ಮತ್ತು ಸಾಮಾಜಿಕ ಹೋರಾಟಗಾರ ದೊರೆಸ್ವಾಮಿ ಅವರಿಗೆ ಪ್ರಶ್ನಿಸಿದ್ದಾರೆ.
‘ಮಿತ್ರ ಪ್ರಕಾಶ್ ರೈ, ಪಿತೃ ಸಮಾನರಾದ ದೊರೆಸ್ವಾಮಿಯವರೆ ಕೊಲೆಯಾದ ಈ ಕಂದಮ್ಮನ ಬಗ್ಗೆ ಮಾತನಾಡಲು ಯಾಕೆ ನಿಮ್ಮ ತುಟಿ ಚಲನೆಯಿಲ್ಲ? ಯಾಕೆ ನಿಮ್ಮ ನಾಲಿಗೆ ನುಡಿಯಲಿಲ್ಲ? ಕಾಂಗ್ರೆಸ್ ಪಾಪದ ಋಣ ತಡೆ ಹಿಡಿಯಿತೇ? ಗಮನಿಸುತ್ತಿದ್ದಾರೆ ಕರುನಾಡ ಜನ! ಪಾರದರ್ಶಕ ನಡೆ ಇರಲಿ! ಇಲ್ಲದಿದ್ದರೆ ನಗೆ ಪಾಟಲು ನಿಮ್ಮ ಶ್ರಮದ ಬದುಕು’ ಎಂದು ಜಗ್ಗೇಶ್ ಟ್ವಿಟರ್ ನಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ